Uncategorizedಕವನ ಪವನ

ಕವನ ಪವನ / ಕನ್ನಿಮೊಳಿ ಕವಿತೆ – ಅನು: ಪ್ರತಿಭಾ ನಂದಕುಮಾರ್

ಮುಟ್ಟಾದವರು

ಉತ್ತರದಲ್ಲಿ ಚಳಿಗಾಲದಲ್ಲಿ
ಪೂಜಾರಿಗಳು ಉಣ್ಣೆಯ ಪ್ಯಾಂಟು ತೊಡುತ್ತಾರೆ

ಪೆರುಮಾಳ್ ದೇವಸ್ಥಾನದ ರಥಕ್ಕೆ
ಮೋಟಾರು ಅಳವಡಿಸಲಾಗಿದೆ

ತಿರುಪತಿಗೆ ಹೋಗಲಾಗದವರು
ಸ್ಥಳೀಯ ಬ್ರ್ಯಾಂಚಿನಲ್ಲಿ ಕಾಣಿಕೆ ಸಲ್ಲಿಸಬಹುದು

ಅಯ್ಯಪ್ಪನ ವ್ರತದಲ್ಲಿ
ಉಪವಾಸವನ್ನು ಮೂರೇ ದಿನಕ್ಕೆ ಇಳಿಸಲಾಗಿದೆ

ಇಸ್ಕಾನ್ ನಲ್ಲಿ ಬಿಳಿಯರು ಪೂಜಾರಿಗಳಾಗಿದ್ದಾರೆ
ಇಂಡೋನೇಷಿಯಾದ ದೇವಸ್ಥಾನಗಳ ಒಳಗೆ
ಚಪ್ಪಲಿ ಹಾಕಿಕೊಂಡೇ ಹೋಗಬಹುದು
ಅಲ್ಲಿ ಗಣೇಶನಿಗೆ ಕೋಳಿಸಾರಿನ ನೈವೇದ್ಯ

ಎಲ್ಲಾ ಜಾತಿಗಳವರು ದೇವಸ್ಥಾನ ಪ್ರವೇಶಿಸಲು
ಕಾನೂನನ್ನು ಬದಲಾಯಿಸಲಾಗಿದೆ
ಆದರೆ ಎಲ್ಲಿಗೆ ಹೋದರೂ
ನಮ್ಮ ಮಹಾಮಹಿಮ ದೇವರು
ಸಹಿಸಲು ಸಾಧ್ಯವೇ ಆಗದಿರುವುದು
ಮುಟ್ಟಾದ ಹೆಂಗಸರನ್ನು ಮಾತ್ರ.

-ತಮಿಳು ಮೂಲ: ಕನ್ನಿಮೊಳಿ
ಕನ್ನಡಕ್ಕೆ: ಪ್ರತಿಭಾ ನಂದಕುಮಾರ್

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *