ಕವನ ಪವನ

ಆತ್ಮಸಾಂಗತ್ಯ – ಶ್ರೀವಲ್ಲಿ ಮಂಜುನಾಥ

ಕಂಗಳಲಿ ಸವಿಗನಸಿನ

ಮೆರವಣಿಗೆ ಹೊರಟಿದೆ;

ಗಂಧಾಕ್ಷತೆಯ ಮಳೆಯಲಿ

ತನು-ಮನ ಮೀಯುತಿದೆ!

 

ಮುಗುಳುನಗುವಿನಲಿ

ತನ್ನಿನಿಯನ ಸೆಳೆಯುತ;

ಹಿತವಾದ ಕಂಪನದಲಿ

ಮನ ನಾಚಿ, ತಲೆಬಾಗಿದೆ!

 

ಮದುವೆಯೆಂದರೆ

ಚಂದಮಾಮದ ಕತೆಯಲ್ಲ ;

ತ್ಯಾಗ,  ಸಹನೆಯೊಡನೆ

ಪ್ರೀತಿ ಎಂಬುದರರಿವಿದೆ!

 

ಸಂಗಾತಿಗೆ ಸಖಿಯಾಗಿ

ನಿರ್ಮಲ ಸ್ನೇಹವನಿತ್ತು;

ಒಲವಿನಾಸರೆಯಾಗಿ

ಮುನ್ನಡೆವ ಛಲವಿದೆ !

 

ದೇಹವೆರಡಾದರೂ

ಆತ್ಮವೊಂದಾಗಿ, ಕೊಡು

ಕೊಳ್ಳುತ್ತಾ, ಬೆಳೆಸಿ-ಬೆಳೆವ ಆತ್ಮಸಾಂಗತ್ಯವಿಲ್ಲಿದೆ !

 

 

 

 

 

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *