ಹೆಗಲು ಕಾಯೊ ಜತಿಗೆ – ಕಿರಸೂರ ಗಿರಿಯಪ್ಪ
ಕೊತಕೊತ ಕುದಿವ ಇರುಳ ನೋಟದಲಿ
ಅವಳ ಹಣೆಯ ಮ್ಯಾಲೆ ಚಂದಿರನ ಮುಗುಳ್ನಗೆ
ಕಣ್ಣಕಾಡಿಗೆಯಲಿ ಚುಕ್ಕಿಗಳು ವಿಹರಿಸುವಾಗ
ರೆಪ್ಪೆಗಳು ನಿಶ್ಟಿಂತೆಯಿಂದ ನಾವೆ ನಡಿಸುತ್ತಿದ್ದವು ನಿರಾಳವಾಗಿ
ದಾರಿಗಳೇ ಗುರುತು ಸಿಗದಷ್ಟು ಇಕ್ಕಟ್ಟಿನಲಿ ಮಲಗಿರುವಾಗ
ಅವನ ನಡಿಗೆಯ ಪ್ರತಿ ಹೆಜ್ಜೆಯೂ ಅವಳ ಬಾಳ ನಕ್ಷೆಯಾಗಿ
ಚುಕ್ಕಿಗಳ ಜೋಕಾಲಿಯಲಿ ಆಕಾಶ ಪುಳಕಗೊಂಡಂತೆ..
ಸೊರಗಿ ಪದರುಗುಟ್ಟುವ ಬೇರಿನ ಮೈಯೊಳಗೆ
ವಸಂತದ ಹೆಗಲಾಗುವ ಅವನೊಳಗೆ
ಅವಳು ಮತ್ತೇ ಮತ್ತೇ ಚಿಗುರುತ್ತಿದ್ದಳು ಬಯಲು ದೀಪ ಹಿಡಿದು
ಅವನ ಹದಗೆಟ್ಟ ಬೇಲಿಯ ದೇಹದೊಳಗೆ ಹೂಮನದ ಧ್ಶಾನವಾಗಿ
ಬೆವರಿನ ಹೆಗಲ ಕಾಯೋ ಆಕಾಶಗಂಗೆ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.
“ಹಿತೈಷಿಣಿ” ನಮ್ಮ ಹೆಮ್ಮೆ
ತುಂಬಾ ಗಟ್ಟಿ ಬರಹಗಳ ವಿಚಾರಪೂರ್ಣ ಸಂಗಾತಿ