ಹಠಮಾರಿ ನನ್ನಮ್ಮ… ಆಶಾ ನಾಗರಾಜ್‌

ಅವಳ ಮೇಲಿನ ಸಿಟ್ಟಿಗೆ ಬುತ್ತಿ ಬಿಟ್ಟು ಹೊರಟೆ ಶಾಲೆಗೆ
ಅಂದು ದಾರಿಯೂ ತನ್ನ ಉದ್ದ ಜಾಸ್ತಿ ಮಾಡಿಕೊಂಡಿತ್ತು!
ನೇಸರನು ತನ್ನ ಕಿರಣಗಳನ್ನು ಕೆಂಡಗಳನ್ನಾಗಿಸಿದ್ದ!
ದಾರಿಯ ಮಧ್ಯದಲ್ಲೆ , ಹೊಟ್ಟೆಯ ಬೈಗುಳ ಶುರುವಾಗಿತ್ತು.
ಶಾಲೆ ಹೊಕ್ಕು ಗಂಟೆಯಲ್ಲೆ ಹೊಟ್ಟೆಗೆ ಬೆಂಕಿಯ ಅನುಭವವಾಗಿತ್ತು.
ಕಣ್ಣ ತುಂಬಿದ್ದ ನೀರು ಒಳಗೂ ಇರದೆ
ಹೊರಗೂ ಬರದೆ ನಾಟ್ಯ ಮಾಡುತ್ತಿತ್ತು

ಬಾಗಿಲ ಬಳಿ ಬುತ್ತಿ ಹೊತ್ತು ತಂದ ಎನ್ನಮ್ಮನ ಆಕೃತಿ ಅಸ್ಪಷ್ಟವಾಗಿ ಕಾಣುತ್ತಿತ್ತು
ಕಾರಣ…ಇಷ್ಟೆ, ನೀರು ತುಂಬಿದ ಕಣ್ಣುಗಳು ಮಂಜಾಗಿದ್ದವು.
ಕೊನೆಗೂ ಹನಿ ನೀರೊಂದು ಹೊರ ಬಂದು ಉಪಕಾರ ಮಾಡಿತ್ತು!
ಅವಳ ಸ್ಪಷ್ಟ ದೃಢ ಮತ್ತು ಮಮಕಾರದ ಮೂರುತಿಯು ಗೋಚರಿಸಿತ್ತು!

ನಾನೋ ಹಠಮಾರಿ ನಿಜ
ಅವಳೋ ….ನನ್ನಮ್ಮ!
ಅವಳ ಹಠ ನನ್ನ ಹಠವ ಗೆದ್ದಿತ್ತು.

ಆಶಾ ನಾಗರಾಜ್‌

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *