ಸ್ಯಾನಿಟರಿ ಪ್ಯಾಡ್‌ಗಿಲ್ಲ ಸುಂಕ
ಕೇಂದ್ರ ಸರ್ಕಾರ, ಸ್ಯಾನಿಟರಿ ಪ್ಯಾಡ್‌ಗಳ ಮೇಲಿನ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ತೆಗೆದು ಹಾಕಿರುವುದನ್ನು ಮಹಿಳಾ ರಾಜಕಾರಣಿಗಳು, ಹೋರಾಟಗಾರರು ಪಕ್ಷ ಭೇದ ಮರೆತು ಸ್ವಾಗತಿಸಿದ್ದಾರೆ.
ಕಳೆದ ವರ್ಷದ ಜುಲೈನಲ್ಲಿ ಜಿಎಸ್‌ಟಿ ಜಾರಿ ಮಾಡಿದಾಗ ಸ್ಯಾನಿಟರಿ ಪ್ಯಾಡ್‌ಗಳ ಮೇಲೆ ಶೇ ೧೮ ರಷ್ಟು ತೆರಿಗೆ ವಿಧಿಸಲಾಗಿತ್ತು. ಮಹಿಳೆಯರ ಆರೋಗ್ಯ ಮತ್ತು ಶುಚಿತ್ವ ಕಾಪಾಡಿಕೊಳ್ಳಲು ಅತ್ಯಗತ್ಯ ವಸ್ತುಗಳಲ್ಲಿ ಒಂದಾದ ಪ್ಯಾಡ್‌ಗಳ ಮೇಲೆ ತೆರಿಗೆ ವಿಧಿಸಿರುವುದಕ್ಕೆ ಮಹಿಳಾ ಸಮುದಾಯದಿಂದ ಭಾರಿ ಪ್ರತಿರೋಧ ವ್ಯಕ್ತವಾಗಿತ್ತು. ಆನಂತರ ತೆರಿಗೆಯನ್ನು ಶೇ ೧೨ ಕ್ಕೆ ಇಳಿಸಲಾಗಿತ್ತು. ಜುಲೈ ೨೨ ರಂದು ನಡೆದ ೨೮ ನೇ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಹಣಕಾಸು ಸಚಿವ ಪಿಯೂಷ್ ಗೋಯಲ್, ಪ್ಯಾಡ್‌ಗಳ ಮೇಲೆ ಸಂಪೂರ್ಣ ತೆರಿಗೆ ವಿನಾಯಿತಿ ಘೋಷಿಸಿರುವುದು ಎಲ್ಲರಲ್ಲಿ ಹರ್ಷ ಮೂಡಿಸಿದೆ.
ಇದು ಮಹಿಳೆಯರ ಹೋರಾಟಕ್ಕೆ ಸಂದ ಜಯವೋ ಅಥವಾ ಮುಂದಿನ ವರ್ಷದ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೈಗೊಂಡ ಕ್ರಮವೋ?
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.