ಸ್ತ್ರೀ ಸೂಕ್ತ – ಕೃಷ್ಣ ದೇವಾಂಗಮಠ

ಪುಟಾಣಿ ಕೂಸು ಹಣ್ಣು ಮುದುಕಿಯಾಗುವಳು
ಕಾಲ ಹರಿದಂತೆ ಹೊಳಪು ತ್ವಚೆ
ಸುಕ್ಕುಗಟ್ಟಿ ಮಡಚಿ ಮುದ್ದೆಯಾಗುವುದು

ಜನನ ಮರಣಗಳ ಗರ್ಭದಲ್ಲೇ ಇಟ್ಟುಕೊಂಡು
ಗರ್ಭದರಿಸಿ ಜೀವನವ ಹದವಾಗಿ ಹಗುರಾಗಿಸಿಟ್ಟುಕೊಂಡು
ಜೀವಿಸುವ ಬಲದೆದುರು ಅರಳುವನು ಪುರುಷ ಮಗುವಿನಂತೆ

ಹಗಲು ರಾತ್ರಿಗಳು ಅವಳೆರಡು ಮಗ್ಗಲು
ಮೌನಿ ಮತ್ತು ಬಾಯಿಬಡಕಿ
ಸೌಂದರ್ಯಲಹರಿ ಝರಿವ ತೊರೆ
ಪ್ರೀತಿಯೇ ಅದರ ತಿಳಿವು
ಜೀವಗಳ ಹಿಡಿದಿಟ್ಟ ವಿಶಾಲ ವಿಶ್ವ

ರಾತ್ರಿ ಜೀಕಾರದ ಸೋಬಾನೆ ಹಾಡು ಸ್ತ್ರೀ ಸೂಕ್ತ
ಒಮ್ಮೊಮ್ಮೆ ಇವಳ ಬದುಕು ಜಾತ್ರೆ ಬೀದಿ,
ಕೆಲಸಾರಿ ಒಂಟಿ ರಸ್ತೆ
ಯಾಕಿಷ್ಟೊಂದು ಏಕಾಂತ
ತ್ರಿಭಂಗಿಯ ತ್ರಿಕೋಣದಿಂದ ಆಚೆ ಬಾ
ತ್ರಿಶಂಕುವಿನ ಸ್ಥಿತಿಗೆ ಇತಿ ಹಾಡು

ಕೃಷ್ಣ ದೇವಾಂಗಮಠ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *