ಚಿತ್ರಭಾರತಿ/ ಸಾವಿನೆದೆಯಲ್ಲಿ ಜೀವಸೆಲೆ- ಭಾರತಿ ಹೆಗಡೆ
ವಿವಾಹೇತರ ಸಂಬಂಧ ಇರಿಸಿಕೊಂಡಂಥ ಹೆಣ್ಣೊಬ್ಬಳು ಕನಸು ಕನಸು ಕಾಣುವುದಕ್ಕೂ ಅನರ್ಹಳು ಎಂಬಂತೆ ಆಗಲ್ಲ, ಈಗಲೂ ಸಮಾಜ ನೋಡುತ್ತದೆ. ಅಂಥದ್ದೇ ವಿಷಯವನ್ನಿಟ್ಟುಕೊಂಡುತೆಗೆದಂಥ ಸಿನಿಮಾಇವಾನ್ ನೈತಿಕತೆ, ಜವಾಬ್ದಾರಿ, ಪ್ರೀತಿ, ನಂಬಿಕೆಗಳ ಕುರಿತಾಗಿ ಸಾಕಷ್ಟು ಪ್ರಶ್ನೆಗಳನ್ನು ಎತ್ತುತ್ತದೆ
ಅದುಎಲ್ಲವನ್ನೂ ಕಳಚಿಕೊಳ್ಳುವ ಹೊತ್ತು.ತೊಟ್ಟಉಡುಪನ್ನು, ಕೊಟ್ಟಜೀವವನ್ನು. ಈ ಚರಾಚರಜಗತ್ತಿನಲ್ಲಿತನಗ್ಯಾರೂಇಲ್ಲವೆಂಬ ಹತಾಶೆಯ ಕಟ್ಟಕಡೆಯಘಟ್ಟವದು. ಹಾಗಾಗಿಯೇಸಾಯುವ ನಿರ್ಧಾರ ಮಾಡುತ್ತಾಳೆ. ತನ್ನ ಬಟ್ಟೆ ಕಳಚುತ್ತಾಳೆ, ತಾನಿದ್ದ ಅಪಾರ್ಟ್ಮೆಂಟ್ನಿಂದಲೇ ಬಿದ್ದು ಸಾಯಲು ಹೊರಡುತ್ತಾಳೆ. ಅಷ್ಟೊತ್ತಿಗೆ ಅವಳ ಎಳೆಯ ಮಗು ಅಳತೊಡಗುತ್ತದೆ.ಅದು ತಾಯಿಯೊಬ್ಬಳ ಸಂದಿಗ್ಧ.ಬದುಕಲಾರೆ, ಮಗುವನ್ನೂ ಬಿಡಲಾರೆಎಂಬಂಥ ಸ್ಥಿತಿ.ಆಗ ಅವಳ ಮುಂದಿರುವಆಯ್ಕೆ, ಮಗುವಿನೊಂದಿಗೇ ಸಾವು.ಮಗುವನ್ನೂಎತ್ತಿಕೊಂಡು ಸಾಯಲು ಹೋಗುತ್ತಾಳೆ.ಅವಳು ನಿಂತದ್ದೀಗ ಆ ಕಟ್ಟಡದತುತ್ತತುದಿಯಲ್ಲಿ.ಬಿದ್ದರೆತಾಯಿಮಗುಇಬ್ಬರೂಜೀವಸಮಾಧಿಯಾಗುತ್ತಾರೆ.ಇನ್ನೇನುಜಿಗಿದೇ ಬಿಡಬೇಕು.ಅಷ್ಟರಲ್ಲಿ ಮಗು ಅವಳ ಮೊಲೆಗೆ ಬಾಯಿ ಹಾಕಿ, ಚೀಪುತ್ತ ಹಾಲನ್ನು ಹೀರುತ್ತದೆ.ಅವಳೆದೆಯಲ್ಲಿ ಹಾಲು ಹರಿಯುತ್ತದೆ.ಮತ್ತೆಜೀವಸೆಲೆಉಕ್ಕುತ್ತದೆ.ನಿಧಾನಕ್ಕೆ ಹೆಜ್ಜೆ ಹಿಂದಕ್ಕೆ ಇಡುತ್ತಾಳೆ.ಸಾವಿಗೆ ಬೆನ್ನು ಹಾಕುತ್ತಾಳೆ.ಬದುಕು ಮಗುವಿನ ರೂಪದಲ್ಲಿಕರೆಯುತ್ತದೆ. ಅದುವರೆಗೆ ಅವಳು ಮಗುವಿಗೆ ಎದೆಹಾಲನ್ನೂಕೊಟ್ಟಿರುವುದಿಲ್ಲ. ಮಗುವಿನ ಅಪ್ಪ ಸಿಗುವವರೆಗೂ ಅವನಿಗೆ ಎದೆಹಾಲನ್ನೂಕುಡಿಸಿವುದಿಲ್ಲವೆಂದು ನಿರ್ಧರಿಸಿದ್ದಳು ಕೂಡ.
ಇದು ಮಾರಾ ಎಂಬ ಹೆಣ್ಣೊಬ್ಬಳ ಬದುಕು.ಹಾಗೆಯೇವಿವಾಹೇತರ ಸಂಬಂಧವಿರಿಸಿಕೊಂಡ ಹೆಣ್ಣೊಬ್ಬಳು ಎದುರಿಸುವಂಥಯುವ ತಾಯಿಯೊಬ್ಬಳ ಕತೆ. ಸಿನಿಮಾದ ಹೆಸರುಇವಾನ್. ಸಿನಿಮಾದಕೇಂದ್ರಬಿಂದು ಮಾರಾ.ರಾಕ್ ಎಂಬ ಮದುವೆಯಾದ ವ್ಯಕ್ತಿಯೊಬ್ಬನನ್ನು ಹುಚ್ಚಳಂತೆ ಪ್ರೀತಿಸಿದವಳು. ಆತಒಬ್ಬಅಪರಾಧದಆರೋಪವನ್ನು ಹೊತ್ತು ತಲೆಮರೆಸಿಕೊಂಡು ಓಡಾಡುವ. ಅವನನ್ನುಜೀವದಂತೆ ಪ್ರೀತಿಸುವ ಮಾರಾ.ಅವನಿಂದ ಮಗುವನ್ನು ಪಡೆದು, ಅವನದೇ ಮಗು ಎಂದು ಸಾಧಿಸಹೊರಟವಳು.
ಸ್ಲೋವೆನಿಯನ್ ಫಿಲ್ಮ್ಮೇಕರ್ಜಾಂಝೆ ಬರ್ಗರ್ ನಿರ್ದೇಶನದಇವಾನ್ ಸಿನಿಮಾಅಲ್ಲಿನ ಪ್ರಸ್ತುತಸಾಮಾಜಿಕ ಪರಿಸ್ಥಿತಿಯನ್ನು ಹೇಳುತ್ತದೆಎಂದೆನಿಸಿದರೂ ಇದುಎಲ್ಲ ಸಮಾಜಕ್ಕೂಅನ್ವಯಿಸುವಂಥದ್ದು.ಸೈಲೆಂಟ್ ಸೊನಾಟಾ, ಡ್ರೈವಿಂಗ್ ಸ್ಕೂಲ್ ಮುಂತಾದಸಿನಿಮಾಗಳ ನಂತರಬರ್ಗರ್ನಿರ್ಮಿಸಿದ ಇವಾನ್ಅತಿಹೆಚ್ಚುಚರ್ಚಿತವಾದ ಸಿನಿಮಾ.ಥ್ರಿಲ್ಲರ್ ಅಂಶಗಳನ್ನು ಒಳಗೊಂಡೂ ಇದೊಂದು ಮಹಿಳಾ ಕೇಂದ್ರಿತ ಸಿನಿಮಾ. ಸ್ಲೊವೆನಿಯನ್ ಫಿಲ್ಮ್ ಫೆಸ್ಟಿವಲ್ನಲ್ಲಿ 8 ಪ್ರಶಸ್ತಿಗಳನ್ನು ಬಾಚಿಕೊಂಡ ಈ ಸಿನಿಮಾ 2018ರ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲೂ ಪ್ರದರ್ಶನಗೊಂಡು ಮೆಚ್ಚುಗೆ ಗಳಿಸಿತ್ತು. ತಾಂತ್ರಿಕವಾಗಿಯೂತುಂಬ ಭಿನ್ನವಾಗಿ ನಿಲ್ಲುವ ಸಿನಿಮಾವಿದು. ಮಾರಾಳ ಕಣ್ಣಿನ ಲಾಂಗ್ಕ್ಲೋಸಪ್ ಶಾಟ್ತೆಗೆಯುವುದರ ಮೂಲಕ ಸಿನಿಮಾ ಪ್ರಾರಂಭವಾಗುತ್ತದೆ.ಅವಳ ಭಯಗ್ರಸ್ತ ಕಣ್ಣುಗಳಿಂದ ಪ್ರಾರಂಭವಾಗಿ ನಿಧಾನಕ್ಕೆ ನೋವು ತುಂಬಿದ ಅವಳ ಮುಖ ನಂತರಇಡೀದೇಹವನ್ನುತೋರಿಸಲಾಗುತ್ತದೆ.
ಅವಳಾಗ ಆಸ್ಪತ್ರೆಯಲ್ಲಿ ಹೆರಿಗೆ ನೋವಿನಿಂದ ಒದ್ದಾಡುತ್ತಿರುತ್ತಾಳೆ.ಆಗ ಮಗುವಿಗಾಗಿ ಕಾಯುತ್ತಿರುವುದಕ್ಕಿಂತ ಹೆಚ್ಚಾಗಿ ಆ ನೋವಿನಲ್ಲೂ ಅವಳು ಒಂದು ಫೋನ್ಕಾಲ್ಗಾಗಿ ಕಾಯುತ್ತಿರುತ್ತಾಳೆ.ಮಗು ಹುಟ್ಟಿದ ಮೇಲೂ ಎದ್ದುಅದ್ಯಾರಿಗೋ ಫೋನ್ ಮಾಡುತ್ತಲೇಹತಾಶೆಯಿಂದ ಮಗುವಿನ ಬಾಯಿಗೆ ಬಾಟಲ್ನ ನಿಪ್ಪಲ್ ಇಡುತ್ತಾಳೆ.ಯಾರಿಗಾಗಿ ಅವಳು ಕಾಯುತ್ತಿದ್ದಳು ಎಂಬುದು ಮುಂದೆ ತೆರೆದುಕೊಳ್ಳುತ್ತಾ ಹೋಗುತ್ತದೆ.
ರಾಕ್ ಒಬ್ಬ ಶ್ರೀಮಂತ ಉದ್ಯಮಿ. ಅವನಿಗಾಗಲೇ ಮದುವೆಯಾಗಿದೆ. ಭ್ರಷ್ಟಾಚಾರದಆರೋಪ ಹೊತ್ತು ತಲೆಮರೆಸಿಕೊಂಡಿರುತ್ತಾನೆ. ಅವನಿಗಾಗಿಯೇಜೀವ ಹಿಡಿದುಕೊಂಡವಳಂತೆ ಕಾಯುತ್ತಿದ್ದಮಾರಾ ಅವನು ಬರದಿದ್ದಾಗ ಮಗುವನ್ನೆತ್ತಿಕೊಂಡುಸೀದ ಅವನ ಮನೆಗೇ ಹೋದಾಗಎದುರಾದದ್ದುರಾಕ್ನ ಮೊದಲ ಪತ್ನಿ.ಇವಾನ್ರಾಕ್ನ ಮಗ ಎಂದಿದ್ದಕ್ಕೆ ಅವಳಿಗೆ ಸಿಟ್ಟು.ಅದ್ಹೇಗೋ ಅವಳ ಕಣ್ಣು ತಪ್ಪಿಸಿ ರಾಕ್ ಮಾರಾಳನ್ನು ಭೇಟಿಯಾಗಿ ನಾಳೆ ನಿಮ್ಮನೆಗೆ ಬರುತ್ತೇನೆಂದು ಹೇಳುತ್ತಾನೆ. ಮಾರನೇ ದಿನರಾಕ್ನ ಬದಲು ಅವನ ಹೆಂಡತಿಯ ಲಾಯರ್ ಮತ್ತುಒಬ್ಬ ಬಾಡಿಗಾರ್ಡ್ಬಂದು ಅವಳಿಗೆ ಚೆನ್ನಾಗಿ ಹೊಡೆದುಇವಾನ್ರಾಕ್ನ ಮಗ ಅಲ್ಲಎಂದು ಪೇಪರ್ಲ್ಲಿ ಬಲವಂತವಾಗಿ ಸಹಿ ಹಾಕಿಸಿಕೊಂಡು ಹೋಗುತ್ತಾರೆ.ಇದರಿಂದ ಹತಾಶಳಾದ ಮಾರಾ ಸಾಯುವ ನಿರ್ಧಾರ ಮಾಡುತ್ತಾಳೆ.ಆದರೆ ಬದುಕಿನತ್ತ ಮುಖ ಮಾಡಿಸುವುದು ಅವಳದ್ದೇ ಮಗು. ರಾಕ್ ಹೆಂಡತಿಯ ವಿರೋಧದ ನಡುವೆಯೂ ಮಾರಾ ಮತ್ತು ಮಗುವನ್ನುಕರೆದುಕೊಂಡುಇಟಲಿಗೆ ಹೋಗುತ್ತಾನೆ.
ಅವನೊಂದಿಗೆ ಹೋಗವುದು ಬೇಡವೆಂದು ಗೆಳತಿಯೊಬ್ಬಳು ಹೇಳಿದರೂ ಕೇಳದೆ ಮಾರಾ ಮಗುವನ್ನೂಕರೆದುಕೊಂಡುರಾಕ್ಜೊತೆ ಹೊರಡುತ್ತಾಳೆ.ಅಷ್ಟು ನಂಬಿಕೆ ಅವನ ಮೇಲೆ. ಈ ಪ್ರೀತಿಯೇ ಹಾಗೆ ತಾನೆ. ಎಲ್ಲ ದೌರ್ಬಲ್ಯಗಳನ್ನೂ ಮೆಟ್ಟಿ ನಿಲ್ಲಿಸುವ ಶಕ್ತಿ ಇರುತ್ತದೆ.ಅಂಥದ್ದೇ ನಂಬಿಕೆಯಲ್ಲಿ ಮಾರಾರಾಕ್ನ ಹಿಂದೆಹೊರಡುತ್ತಾಳೆ.ಪೊಲೀಸರು ಮತ್ತುರಾಕ್ನ ಹೆಂಡತಿಕಡೆಯವರುಇವರನ್ನು ಹಿಂಬಾಲಿಸುತ್ತಲೇಇರುತ್ತಾರೆ.ಪ್ರತಿಬಾರಿ ತಪ್ಪಿಸಿಕೊಳ್ಳುವಾಗಲೂ ರಾಕ್ಗೆಇದೊಂದುಆಟವಾದರೆ ಮಾರಾಗೆಆತಂಕ.ಒಮ್ಮೆ ಪೆಟ್ರೋಲ್ ಬಂಕ್ ಬಳಿ ಕಾರು ನಿಲ್ಲಿಸಿ ಮಗುವನ್ನುಕಾರಲ್ಲೇ ಬಿಟ್ಟುಇಬ್ಬರೂ ಬ್ಯಾಂಕ್ಗೆ ಹೋಗುತ್ತಾರೆ.ವಾಪಾಸು ಬರುವಷ್ಟರಲ್ಲಿ ಪೊಲೀಸರುಅವರಕಾರನ್ನು ಸುತ್ತವರಿದಿರುತ್ತಾರೆ.ಮಾರಾಳಿಗೆ ಮಗುವಿನ ಚಿಂತೆಯಾದರೆರಾಕ್ಗೆತಾನು ತಪ್ಪಿಸಿಕೊಳ್ಳುವುದು ಮಾತ್ರ ಮುಖ್ಯವಾಗಿರುತ್ತದೆ.ಅದಕ್ಕೆ ಮಗುವಿನ ಬಳಿ ಹೋಗುವ ಮಾರಾಳನ್ನು ತಡೆಯುತ್ತಾನೆ. ಪೊಲೀಸರು ಮಗುವನ್ನುಅನಾಥಾಶ್ರಮವೊಂದರಲ್ಲಿ ಸೇರಿಸುತ್ತಾರೆ.ಇತ್ತ ಮಾರಾಳಿಗೆ ಮಗುವನ್ನು ಬಿಟ್ಟಿರಲಾಗುವುದಿಲ್ಲ. ಅಲ್ಲದೆ ಅವಳ ಎದೆಯಲ್ಲಿ ಹಾಲು ತುಂಬಿ ಎದೆನೋವು ಶುರುವಾಗಿಬಿಡುತ್ತದೆ.ರಾಕ್ನೊಡನೆಒಂದೇ ಸಮನೆ ಗಲಾಟೆ ಮಾಡುತ್ತಾಳೆ. ಆಗಲೇ ಅವಳಿಗೆ ರಾಕ್ನ ಮೇಲಿನ ನಂಬಿಕೆ ಹೊರಟುಹೋಗುತ್ತದೆ.ಅವನನ್ನು ಧಿಕ್ಕರಿಸಿಅನಾಥಾಶ್ರಮಕ್ಕೆ ಹೋಗುತ್ತಾಳೆ.ಕಡೆಯಲ್ಲಿ ಅವಳೊಬ್ಬಳೇ ಮಗುವನ್ನುಎತ್ತಿಕೊಂಡು ಹೋಗುವಾಗ ನಮಗೆ ಕಾಡುವ ಪ್ರಶ್ನೆಯೆಂದರೆಅವಳದ್ದು ತಪ್ಪುಆಯ್ಕೆಯಾಗಿತ್ತಾ…?
ಮೇಲ್ನೋಟಕ್ಕೆಇದೊಂದು ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಸಿನಿಮಾ ಎಂದೆನಿಸಿದರೂ ಜೀವನದಲ್ಲಿ ಸಂಗಾತಿಯಆಯ್ಕೆ ಮಾಡಿಕೊಳ್ಳುವಾಗ ತಪ್ಪುಆಯ್ಕೆಯಾದರೆಹೆಣ್ಣೊಬ್ಬಳಿಗೆ ಎದುರಾಗುವಂಥ ಸಮಸ್ಯೆಗಳೇನು, ಅದರಲ್ಲೂ ಮಗು ಹುಟ್ಟಿದ ಮೇಲೆ ಆಕೆ ಮಗು, ತಾಯ್ತನ, ಗೆಳೆಯ ಈ ಮೂರನ್ನೂ ನಿಭಾಯಿಸುತ್ತ ಸಮಾಜವನ್ನುಎದುರಿಸುವರೀತಿ ಹೇಗಿರುತ್ತದೆಎಂಬುದಕ್ಕೂಉತ್ತಮಉದಾಹರಣೆಯಾಗಿ ನಿಲ್ಲುತ್ತದೆ.
ಈ ಸಿನಿಮಾ ಬಿಡುಗಡೆಯಾದ ಮೇಲೆ, ಇಡೀ ಸಿನಿಮಾ ಮಹಿಳಾ ಕೇಂದ್ರಿತವಾಗಿದೆ.ಅಂದರೆಒಬ್ಬ ಪುರುಷ ಮಹಿಳಾ ದೃಷ್ಟಿಕೋನದಲ್ಲಿಒಂದು ವಿಷಯವನ್ನುನೋಡಲು ಸಾಧ್ಯವೇ?ಎಂದುಪತ್ರಕರ್ತನೊಬ್ಬಕೇಳಿದ್ದಕ್ಕೆ ನಿರ್ದೇಶಕಬರ್ಗ್, ನಾನಿಲ್ಲಿ, ಗಂಡು-ಹೆಣ್ಣುಎಂಬುದಕ್ಕಿಂತಲೂ ಮಾನವೀಯ ನೆಲೆಯಲ್ಲಿ ಮಾತ್ರ ನೋಡುತ್ತ ಹೋಗಿದ್ದೇನೆ. ನನಗೆ ನನ್ನ ಮಗು ಹುಟ್ಟಿದ ಮೇಲೆ ಅವನು ಯಾವರೀತಿಯ ಸಮಾಜದಲ್ಲಿ ಹುಟ್ಟಿದ್ದಾನೆ, ಇಷ್ಟೊಂದು ಮುಂದುವರಿದಿದೆ ಎಂದೆನಿಸಿದ ಈ ಸಮಾಜದಲ್ಲಿಗಂಡು-ಹೆಣ್ಣಿನ ಸಂಬಂಧಗಳು ಅದೆಷ್ಟುಸಂಕೀರ್ಣವಾಗಿವೆಎಂದು ನನ್ನನ್ನು ನಾನೇ ಕೇಳಿಕೊಂಡಾಗ ಹುಟ್ಟಿದ್ದೇಇವಾನ್ಎಂದು ನಿರ್ದೇಶಕ ಸಂದರ್ಶನವೊಂದರಲ್ಲಿ ಹೇಳಿರುವುದು ಅರ್ಥಗರ್ಭಿತವಾಗಿದೆ.

ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.
ಚಂದದ ಚಿತ್ರ ವಿಮರ್ಶೆ. ಗಂಡಿಗೆ ಕಾಮ ಕೇವಲ ಭೋಗ , ಮನೋರಂಜನೆ. ಹೆಣ್ಣಿಗೆ ಜವಬ್ದಾರಿ. ಹಾಗಾಗಿ ಇಂಥ ಕತೆಗಳು ಪದೆ ಪದೆ ಮುಖ್ಯ ಅನಿಸಿಕೊಳ್ಳುತ್ತದೆ.
ಚಿತ್ರ ಭಾರತಿ ಅಂಕಣದಲ್ಲಿ ಒಂದು ಉತ್ತಮ ಚಿತ್ರದ ವಿಶ್ಲೇಷಣೆ ಮಾಡಿರುವುದಕ್ಕೆ ಅಭಿನಂದನೆಗಳು…🙏🙏
ಆದರೆ ಕೆಲವೊಂದು ಕಡೆ ಒಂದು ಪದ ಮತ್ತು ಇನ್ನೊಂದು ಪದಗಳ ಮಧ್ಯೆ ಸ್ವಲ್ಪ ಜಾಗ ಕೊಟ್ಟಿದ್ದರೆ ಓದಲು ಇನ್ನಷ್ಟು ಸಂಮಜಸವಾಗಿರುತಿತ್ತು ಎಂಬುದು ನನ್ನ ಅನಿಸಿಕೆ…