Latestದೇಶಕಾಲ

ಸಮ್ಮತಿಯ ಸಲಿಂಗಕಾಮ ಅಪರಾಧವಲ್ಲ : ಸುಪ್ರೀಂ ಕೋರ್ಟಿನ ಮಹತ್ವದ ತೀರ್ಪು

ಸಲಿಂಗಕಾಮ ಅಪರಾಧವೆಂದು ಹೇಳುವ ಭಾರತೀಯ ದಂಡಸಂಹಿತೆಯ ೩೭೭ನೇ ಸೆಕ್ಷನ್ ಅನ್ನು ರದ್ದುಪಡಿಸುವ ಮೂಲಕ ಸುಪ್ರೀಂಕೋರ್ಟಿನ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ಬ್ರಿಟಿಷ್ ಕಾಲದ ಕಾನೂನನ್ನು ರದ್ದುಪಡಿಸಿದೆ. ’ವ್ಯಕ್ತಿಯನ್ನು ಇರುವಂತೆಯೇ ಸ್ವೀಕರಿಸಿ’ ಎನ್ನುವ ಈ ತೀರ್ಪು ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಘನತೆಯನ್ನು ಎತ್ತಿ ಹಿಡಿದಿದೆ. ಇದರಿಂದಾಗಿ ಸಲಿಂಗಕಾಮವನ್ನು ಸಕ್ರಮಗೊಳಿಸಿದ ಜಗತ್ತಿನ ೨೬ನೇ ದೇಶ ಭಾರತ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಸುಪ್ರೀಂಕೋರ್ಟಿನ ಈ ತೀರ್ಪು ಸಂವಿಧಾನದತ್ತವಾದ ಹಕ್ಕುಗಳನ್ನು ತಮಗೆ ಕೊಟ್ಟಿದೆ ಎಂದು ದೇಶದೆಲ್ಲೆಡೆ ಲೈಂಗಿಕ ಅಲ್ಪಸಮುದಾಯದವರು ಸಂತಸ ವ್ಯಕ್ತಪಡಿಸಿದ್ದಾರೆ; ಸಂಭ್ರಮ ಆಚರಿಸಿದ್ದಾರೆ.

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *