ಕವನ ಪವನಸಾಹಿತ್ಯ ಸಂಪದ

ಶೀರ್ಷಿಕೆ ಬೇಕೆ ಇದಕೆ – ಪರಿಮಳ ಕಮತರ

ನಿನ್ನ ಗಾವುದ ದಾರಿ
ನನ್ನ ನೆನಪಿನಂಗಳಕೂ
ಬಿಳಿಹಾಳೆಯ ಮೇಲೇ ಕುಳಿತ ಕವಿತೆಯಷ್ಟೇ ಅಂತರ
ಮಾರಾಯಾ…ಷರತ್ತಿಗೆ ಬಿದ್ದು ಆಡಿದ ಆಟ
ಕೂಡಿದ ಕೂಟಗಳು
ಮುದುರಿ ಬಿದ್ದಿವೆ ದಿಂಬ ಕೆಳಗೆ
ನೇರಕೆ ಚಾಚಿದ ಹಾಸಿಗೆ ಮುಸಿ ನಗುತದೆ ನೋಡಿ

ಕನಸಲೇ ಉಪ್ಪರಿಗೆ ಕಟ್ಟುವ
ಯಾರಿಗೂ ಸೋಲದ ನನಗೆ
ನೀ ಹುಚ್ಚಿಡಿಸಿ ನಿದ್ದೆಗೆಡಿಸಿದ್ದು ಹೇಗೋ
ತಿಳಿಯದ ಬೆರಗು ಇಂದಿಗೂ

ಆ ನೆನಪಲಿ ಅದೆಷ್ಟು ಕವನಗಳು ಹರಿದಾಡಿದರೂ
ಅಪೂರ್ಣ ಬದುಕ ಕಾವ್ಯ
ಬಿಟ್ಟ ಸ್ಥಳ ತುಂಬಲು ನೀನೇ ಬರಬೇಕು
ಆದರೆ ನೀನು?
ಬಿಡಿಸದ ಒಗಟು ಇಂದಿಗೂ
ಬಾಂಧÀವ್ಯದ ಏಸೋ ವಸಂತಗಳ ಹೂವರಳಿದರು

ಚನಕೂ ನಿನ್ನಾರಾಧನೆಯೆ ಧ್ಯಾನ
ಎಂಥ ಮನಸು
ಕಂಡೂ ಕಾಣದ ಚದುರಿ ಮುದುರಿದ ನೂರು ಕನಸು

ಭೂತ ನನ್ನ ಸ್ಥಿರತೆಯ ಛಾಯೆ
ರೆಪ್ಪೆಯಂಚಲಿ ಜಾರುವ ಕಣ್‍ಹನಿಗಳ ಭಾವಕೆ
ಜಾಣಕುರುಡ ನೀ
ಏ ಇವನೇ..
ಭಾವನೆಗಳೆ ಇಲ್ಲವೆಂದಲ್ಲ ನಿನಗೆ
ನಾ ದಕ್ಕುವುದಿಲ್ಲವೆಂದು ಸಾರಿ ಹೇಳಿದರೂ
ನಿನ್ನಾಸೆ ಇಡಿಯಟ್ ಮನಕೆ

ಹೇರಿಕೆಗೆ ಬಲಿಯಾದದ್ದೇನೋ ಇದೆ
ಆದರೂ ಕಲ್ಲೆದೆಯಲಿ ಹೂವನೊಂದ ಅರಳಿಸಿದ್ದಿ.. ಕಳ್ಳ
ಬಾಡೂವುದೆ ಇಲ್ಲವದು
ದಿನವೂ ಅರಳುವುದು ಅಚ್ಚಹಸುರಾಗಿ

ನಿನ್ನ ಪಡೆಯುವ ತೀವ್ರ ಬಯಕೆಗಳಾಚೆ
ಅಪರಿಚಿತನೆನಿಸುತ್ತಿ, ಮೈ ಡಿಯರ್ ಸ್ಟ್ರೇಂಜರ್
ನೀ ತೋರುವ ಅಸ್ಪಷ್ಟ ಅಸಡ್ಡೆಯ ಬಯಲ ಭಾವಗಳಿಂದ
ಕಂಗಳಲೂ ಕಪ್ಪು ಕಾರ್ಮೊಡಗಳು
ಮುಪ್ಪಡರಿ ಕೂಇವೆ ಇನ್ನೂ
ನೀನೇ ತೇಲಿಸಬೇಕಂತೆಯಪ್ಪಾ

ಧೃಡ ಒಲವ ಜಾಗ್ರತೆ
ನಿನ್ನಂಗಳದ ಪ್ರೇಮಶರಧಿಯ ಹರಿವಿನಗುಂಟ
ತೊನೆಯುತ ಮನದಂಗಳದಿ
ಗುಲಾಬಿಯ ತೋಟವೊಂದರಳುತದೆ
ಜೀವಬೆಸೆದ ನೀನೆಂಬ ನಂಬಿಕೆಗೆ
ಕಂಗಳಲಿ ನಾಳೆಯ ಕನಸುಗಳೂ..
ಮಿರುಗಿ ಮಳೆಯಂತೆ ಹೊಳೆಹರಿಸಿ
ಬಿಸಿಲ ಸುರಿಸುವ ನೀ ಭಾವನೆಗಳ ಬೆಳಕೇಗೆ ಆದಿ
ಅನಿಸುತ್ತದೆ ಸುಖಾಸುಮ್ಮನೆ
ಆದರೂ ಕಾಲಕೆ ಸೆಡ್ಡುಹೊಡೆದು ಕಾಯುವ ಖಯಾಲಿ ನನಗೆ

ಮತ್ತೆ ಕಾಲಬೆರಳುಗಳಿಂದ
ನೆನಪ ರಂಗೋಲಿ ಬಿಡಿಸುತ್ತಿದ್ದೇನೆ ಕಂಡಕಂಡಲ್ಲೆ

 

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *