ರಂಗೋಲಿ ಚಿತ್ತದಲಿ – ಕಿರಸೂರ ಗಿರಿಯಪ್ಪ
ನೀರು ಚಿಂಪಡಿಸಿ ಸಗಣಿ ಸಾರಿಸಿ
ಅಂಗಳದ ಎದೆಗಳಲಿ ಚುಕ್ಕಿಗಳ ಪೋಣಿಸಿ
ಮಲಗಿಸುವ ಅವಳ ಕೈಗಳಲಿ
ಕನಸುಗಳ ಎಳೆ ಮುಡಿಸುವ ಸಮಯ
ಬಾಗಿಲು ತೊಳೆದು ಬೆಳಕ ತೋರಣ ಕಟ್ಟುವ
ಅವಳ ರಂಗೋಲಿ ಚಿತ್ತದಲಿ
ಮಗುವಿನಳುಗಳು ಹಾಸಿಗೆಯಲ್ಲೇ ಹೇಲುಚ್ಚೆಯಾಗಿ ಗೋಚರ
ಬಗಲ ಕೂಸನ್ನೊಮ್ಮೆ ಹೊಕ್ಕಳಿಗೆ ದಬ್ಬಿ ಮಂಡಿಯೂರಿ
ಆಶ್ಟರ್ಯದಿಂದ ಮತ್ತೇ ಮತ್ತೆ ನೋಡುತ್ತಾಳೆ ರಂಗೋಲಿ
ರಂಗಿನಲಿ ತಾನೇ ನವಿಲು ಗರಿಗಳ ಹಾಗೆ !
ಒಮ್ಮೊಮ್ಮೇ ತನ್ನದೇ ಕಣ್ಣೀರ ಕಥೆಗಳ ರಕ್ತದ ಕಲೆಗೆ ದಿಗಿಲಾಗುತ್ತಾಳೆ
ಕಾಲ್ಬೆರಳಲಿ ಹೊಸಕಿಕೊಂಡ ರಂಗೋಲಿ ಚಿತ್ತದಲಿ
ಅಂಗಳದ ಗಾಯಗಳು ದಿಟ್ಟಿಸಿ ನೋಡುತ್ತಿವೆ ತಿವಿತಗಳ ಬಜಾರಿನ
ಮಾಯಾಜಾಲದ ಜಾಡಿನಿಂದ ಮುಕ್ತಗೊಳಿಸೆಂದು
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.