ಮಹಿಳಾ ದಿನ ಸಪ್ತಾಹ – ಉತ್ಸಾಹಭರಿತ ಆರಂಭ!

ಹಿತೈಷಿಣಿ ಮತ್ತು ಸಮಕಾಲೀನ ಸಂಘಟನೆಗಳು ಜಂಟಿಯಾಗಿ ಕೈಗೆತ್ತಿಕೊಂಡಿರುವ  ಅಂತರರಾಷ್ಟ್ರೀಯ ಮಹಿಳಾ ದಿನದ ಸಪ್ತಾಹ ಇಂದು ಸ್ಫೂರ್ತಿದಾಯಕವಾಗಿ ಶುರುವಾಯಿತು. 

ಎನ್ ಆರ್ ಕಾಲೊನಿಯ ವೀಣೆ ರಾಜಾರಾವ್ ಸಭಾಂಗಣದಲ್ಲಿ ಆಯೋಜಿತವಾಗಿದ್ದ ಸಭೆಯಲ್ಲಿ ಖ್ಯಾತ ಪತ್ರಕರ್ತೆ ಡಾ.ವಿಜಯಾ ಉದ್ಘಾಟಕರಾಗಿದ್ದರು. ಸಾಮಾಜಿಕ ಕಾರ್ಯಕರ್ತೆ ಡಾ.ಜಯಲಕ್ಷ್ಮಿ. ಎಚ್.ಜಿ ಅಧ್ಯಕ್ಷತೆ ವಹಿಸಿದ್ದರು.    ಸಭೆಯಲ್ಲಿ ಹೆಸರಾಂತ ಸ್ತ್ರೀವಾದಿ ಲೇಖಕಿ ಡಾ.ಎನ್. ಗಾಯತ್ರಿ ಅವರು ಬರೆದಿರುವ ಮಹಾನ್ ಹೋರಾಟಗಾರ್ತಿ, ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆರಂಭಿಸಿದ ಕ್ಲಾರಾ ಜೆಟ್ ಕಿನ್ ಅವರ ಕುರಿತಾದ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಪ್ರಸಿದ್ಧ ಪತ್ರಕರ್ತೆ ಡಾ.ಆರ್.ಪೂರ್ಣಿಮ ಪುಸ್ತಕದ ಕುರಿತು ಮಾತನಾಡಿದರು. ನಂತರ ಡಾ.ಗಾಯತ್ರಿ ” ಮನೆಕೆಲಸಕ್ಕೆ ಕೂಲಿಯೇ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.ಅದರ ಬಗ್ಗೆ ನಡೆದ ಚರ್ಚೆಯಲ್ಲಿ ಹಾಜರಿದ್ದ ಅನೇಕ ಸ್ತ್ರೀ- ಪುರುಷರು ಆಸಕ್ತಿಯಿಂದ  ತೊಡಗಿಕೊಂಡದ್ದು ಒಂದು ವಿಶೇಷ. ಸಭೆ ಆರಂಭವಾಗುವ ಮುನ್ನ ಪ್ರಕಾಶ್ ಅರಸ್, ವಿದುಷಿ ವಿಜಯಲಕ್ಷ್ಮಿ, ಸತ್ಯವತಿ, ಡಾ.ಜಯಲಕ್ಷ್ಮಿ ಇವರುಗಳು ಮಹಿಳಾ ಹೋರಾಟದ ಕುರಿತಾದ ಹಾಡುಗಳನ್ನು ಹಾಡಿದರು.

“ವಿಶ್ವ ಮಹಿಳಾದಿನ ರೂವಾರಿ ಕ್ಲಾರಾ ಜ಼ೆಟ್ಕಿನ್ ” ಪುಸ್ತಕ ಬಿಡುಗಡೆ

ಅಂತರರಾಷ್ಟ್ರೀಯ ಮಹಿಳಾ ದಿನವು ಸ್ತ್ರೀ ಸಮೂಹದ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಡುವ ಸಂಕಲ್ಪವನ್ನು ನವೀಕರಿಸಬೇಕಾದ ದಿನ.ಇದಕ್ಕಾಗಿ ಅನೇಕ ಕಾರ್ಯಕ್ರಮ ಗಳು ನಡೆಯುತ್ತವೆ.ಆದರೆ ಅದರ ಇತಿಹಾಸ ಅನೇಕರಿಗೆ ಗೊತ್ತಿರುವುದಿಲ್ಲ.ಕ್ರಾಂತಿಕಾರಿ ಕಮ್ಯುನಿಸ್ಟ್ ನಾಯಕಿ ಕ್ಲಾರಾ ಜೆಟ್ ಕಿನ್ ಎರಡು ದಶಕಗಳ ಸತತ ಪ್ರಯತ್ನದ ಮೂಲಕ ಇದರ ಘೋಷಣೆಗೆ ನೂರಹತ್ತು ವರ್ಷಗಳ ಹಿಂದೆ ಕಾರಣರಾದರು..ಸಮರಶೀಲ, ತತ್ವನಿಷ್ಠ, ಪ್ರಖರ ವೈಚಾರಿಕತೆ ಇದ್ದ ಈ ಮಹಾನ್ ನಾಯಕಿಯ ಬಗ್ಗೆ ಒಂದು ಕನ್ನಡ ಪುಸ್ತಕದ ಅವಶ್ಯಕತೆ ಇತ್ತು.ಅದನ್ನು ಪೂರೈಸುವಂತೆ ಡಾ.ಎನ್.ಗಾಯತ್ರಿ ರಚಿಸಿರುವ ಈ ಪುಸ್ತಕವನ್ನು ಇದೀಗ ಬಿಡುಗಡೆ ಮಾಡಲಾಗಿದೆ. ನವಕರ್ನಾಟಕ ಪ್ರಕಾಶನ ಹೊರತಂದಿರುವ ಈ ಕೃತಿ ಹೋರಾಟಗಾರರಿಗೂ, ಅಧ್ಯಯನಶೀಲರಿಗೂ, ಎಲ್ಲರಿಗೂ ಉಪಯುಕ್ತ. ಕೇವಲ ೩೦ರೂ ಬೆಲೆಯ ಈ ಕಿರು ಹೊತ್ತಿಗೆ ನಮ್ಮ ನಿಮ್ಮೆಲ್ಲರ ಸಂಗ್ರಹದಲ್ಲಿ ಇರಲೇಬೇಕಾದಂತಹುದು.

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *