ಕವನ ಪವನ/ ಮಳೆಗಾಲದ ಒಂದು ದಿನ- ಅನು: ಸೀಮಾ ಕುಲಕರ್ಣಿ

Henry Wadsworth Longfellow’s `The Rainy Day’

ಮಳೆಗಾಲದ ಒಂದು ದಿನ

ದಿನ ತಂಪಾಗಿದೆ, ಮಬ್ಬಾಗಿ ಕತ್ತಲಾಗಿದೆ;
ಮಳೆ ಸುರಿಯುತ್ತಲಿದೆ, ಈ ಗಾಳಿಗೆ ಸಹನೆಯಿಲ್ಲ;
ಇಲ್ಲಿ ದ್ರಾಕ್ಷಿಯ ಬಳ್ಳಿ ಹಾವಸೆ ಗೋಡೆಗೆ ಜೋತುಬಿದ್ದಿದೆ,
ಅಲ್ಲಿ ಗಾಳಿಯ ಹೊಡೆತಕ್ಕೆ ತರಗೆಲೆಗಳುದುರಿವೆ,
ಹಗಲು ಕತ್ತಲೆಗವಿದು ರೂಕ್ಷವಾಗಿದೆ.


ಬದುಕು ಕೊರಡಿನಂತಾಗಿದೆ, ಸೋತು, ಅರ್ಥಹೀನವಾಗಿದೆ;
ಈ ಬಾಳಲ್ಲಿ ಮಳೆ ನಿಲ್ಲದು, ಬಿರುಗಾಳಿಯೂ ನಿಲ್ಲದು;
ನೆನಪುಗಳಿನ್ನೂ ಆ ಹಾಳಾದ ನಿನ್ನೆಗಳಿಗಂಟಿಕೊಂಡಿವೆ
ಯುವ ಮನದಾಸೆಗಳೆಲ್ಲ ತತ್ತರಿಸಿ ಚೂರು ಚೂರಾಗಿವೆ,
ಬದುಕು ಕಳೆಗುಂದಿ ಕಪ್ಪಿಟ್ಟಿದೆ.


ನೊಂದ ಹೃದಯವೇ ನಿಲ್ಲು! ಚಡಪಡಿಸಬೇಡ;
ಮೋಡದ ಮರೆಯ ಸೂರ್ಯನಿನ್ನೂ ಹೊಳೆಹೊಳೆಯುತ್ತಲಿರುವ;
ಎಲ್ಲರಂತಿಹುದು ನಿನ್ನದೂ ಹಣೆಬರಹ, ಇದ ನೀ ತಿಳಿ,
ಬದುಕಲ್ಲಿ ಮಳೆಗಾಲ ಬರುವದು ಖಚಿತ, ಹಾಗೇ ಕೆಲ ದಿನ ಮನ ಖಿನ್ನವಾಗುವದು ಸಹಜ.

ಅನುವಾದ: ಸೀಮಾ ಕುಲಕರ್ಣಿ
ಕೌಲಾಲಂಪುರ, ಮಲೇಶಿಯ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *