ಮನ್ಮಥ – ಸುಗುಣ ಸಿಂಹ
ಮನ್ಮಥನನ್ನೇ ಸುಟ್ಟ ಮಹದೇವನೆಂಬ ಹೆಮ್ಮೆ ತೊಟ್ಟು
ಮರೆಯಾದೆ ನೀನೆಲ್ಲಿ ಹಣೆಗಣ್ಣ ಮುಚ್ಚಿಟ್ಟು
ಮತ್ತೊಮ್ಮೆ ರುದ್ರ ತಾಂಡವ ಮಾಡು ಬೀದಿಕಾಮಣ್ಣರ ನೀ ಸುಟ್ಟು
ಮದಗೂಳಿಗಳ ಬೂದಿ ಕದಡಿ ಕುಡಿದು ಕಂಠದಲಿ ನಿಲಿಸಿಟ್ಟು
ಮತ್ತೇರಿ ಕುಣಿದು ಬಿಡು ಮದವೆಲ್ಲ ತುಳಿದುಬಿಡು
ಮನುಜರೆಲ್ಲರ ಭಾವದೊಳಹೊಕ್ಕು ಬೀಡುಬಿಡು
ಮತ್ತೆಂದೂ ಮತ್ತೆಲ್ಲೂ ಈ ಘೋರ ನಡೆಯದೊಲು
ಮಣಿಸೆಲ್ಲರಾ ನೀ ಹರಹರಾ ಇರಿಸೆಲ್ಲೆಡೆ ನಿನ್ನ ಕಣ್ಕಾಪರ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.