Latestಚಾವಡಿವ್ಯಕ್ತಿಚಿತ್ರ

ಭಾರತಕ್ಕೊಂದು ಹೆಮ್ಮೆಯ ಗರಿ ಗೀತಾ ಗೋಪಿನಾಥ್‌

ಭಾರತ ಸಂಜಾತ ಅರ್ಥಶಾಸ್ತ್ರಜ್ಞೆ ಡಾ. ಗೀತಾ ಗೋಪಿನಾಥ್‌ ಐಎಂಎಫ್‌ನ ಮುಖ್ಯ ಆರ್ಥಿಕ ಸಲಹೆಗಾರಳಾಗಿ ಇತ್ತೀಚೆಗೆ ಆಯ್ಕೆಯಾಗಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ. ಹಿಂದೊಮ್ಮೆ ಭಾರತೀಯ ರಿಸರ್ವ್‌ ಬ್ಯಾಂಕಿನ ಗವರ್ನರ್‌ ಡಾ. ರಘುರಾಮ ರಾಜನ್‌ ಅವರು ಅಲಂಕರಿಸಿದ್ದ ಸ್ಥಾನವಿದು. ಪ್ರಸ್ತುತ ಹಾರ್ವರ್ಡ್‌ ವಿಶ್ವಿದ್ಯಾಲಯದ ಅಂತರರಾಷ್ಟ್ರೀಯ ಅಧ್ಯಯನ ಮತ್ತು ಅರ್ಥಶಾಸ್ತ್ರ ವಿಭಾಗದಲ್ಲಿ ಪ್ರೊಫೆಸರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ೪೬ ವರ್ಷ ವಯಸ್ಸಿನ ಗೀತಾ, ಮೈಸೂರು ಮತ್ತು ದೆಹಲಿಯಲ್ಲಿ ಶಿಕ್ಷಣ ಪಡೆದು ೨೦೦೧ ರಲ್ಲಿ ಅಮೆರಿಕೆಯ ಪ್ರಿನ್ಸ್‌ಟೆನ್‌ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್‌ ಪಡೆದವರು. ೨೦೧೬ ರಲ್ಲಿ ಕೇರಳದ ಮುಖ್ಯಮಂತ್ರಿಗಳಿಗೆ ಆರ್ಥಿಕ ಸಲಹೆಗಾರಳಾಗಿ ನೇಮಕಗೊಂಡಿದ್ದರು. ಈ ಭಾರತದ ಹೆಮ್ಮೆಯ ಮಗಳಿಗೆ ಹಿತೈಷಿಣಿಯ ಅಭಿನಂದನೆಗಳು.

ಹಿತೈಷಿಣಿ ಬಳಗ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *