ಬಿ ಎನ್ ಸುಮಿತ್ರಾಬಾಯಿ ಕವನ
ಪುಟ್ಟಮ್ಮಜ್ಜಿ
ಆಡಾಡುತ್ತಲೇ ಬೆಳೆದ ಪುಟ್ಟಿ
ಪುಟ್ಟಕ್ಕ, ಪುಟ್ಟಮ್ಮ, ಕೊನೆಗೆ ಪುಟ್ಟಮ್ಮಜ್ಜಿ
ಅಂದ್ರೆ ಅದೇ ಹಳೇ ಕತೆ ಅಂದ್ರಾ?
ಇಲ್ರೀ ಸ್ವಲ್ಪ ಬೇರೆ.
ಮೈನೆರೆವ ಮೊದಲೇ ನೋಡಬಂದ ಗಂಡಿಗೆ
‘ನಮಿಸು ಬಾ ತಾಯೀ ಪುಟ್ಟಕ್ಕ ಅಂದರು ಅಪ್ಪ.
ಹೆಸರಿಗಷ್ಟೆ ಪುಟ್ಟಿ. ಬೆಳೆದದ್ದು ಜಟ್ಟಿಹಾಗೆ
ಡಬ್ಬಲ್ ಮೂಳೆಯ ಎತ್ತರದ ಗಾತ್ರದ ಕಸುವುಳ್ಳ ಹೆಣ್ಣು.
ಚಿನ್ನಿ ದಾಂಡು ಗೋಲಿ ಕಬಡ್ಡಿ
ಹೊಳೆ ಈಜಿ ಕಾಡು ಸುತ್ತಿ ಬೆಟ್ಟ ಹತ್ತಿ
ಗಟ್ಟಿಮುಟ್ಟಾದ ಮೈಯಿ.
ಇಂಥವಳನ್ನು ಆಳಲು ದೊರೆತ ಆಸಾಮಿ
ಮೀಸೆ ಮಲ್ಲಣ್ಣ ಗರಡಿಯಾಳು. ಆರೂವರೆಯಡಿ
ಎತ್ತರದ ಕುಸ್ತಿ ಗಾರುಡಿಗ
ತುಂಬಿದ್ದ ಪುಟ್ಟಿಯ ಮನ.
ನೋಡುವ ಕಣ್ಣು ತುಂಬುವ ಜೋಡಿ
ಕುಸ್ತಿಯಲ್ಲಿ ಸೀಮೆಗೆಲ್ಲ ನಡುಕ ಹುಟ್ಟಿಸುವ ಮಲ್ಲಣ್ಣ
ಪುಟ್ಟಕ್ಕನೆದುರು ಹಸುಗೂಸು.!
ತೆಂಗಿನ ಮರಹತ್ತಿ ಕಾಯಿ ಕಿತ್ತಿದ್ದ ಹುಡುಗಿ
ಗಂಡನೆದುರು ಎಳೆದು ತಲೆಮೇಲೆ ಸೆರಗು
ಮುಖ ದನಿ ಎತ್ತದ ಕೋಮಲೆ !
ಸಂಸಾರದ ಆಟಕ್ಕೆ ಜೊತೆಗೂಡಿದ್ದ ಸಾಹಸಿ ಜೋಡಿ ಈಗಿಲ್ಲ.
ಮಲ್ಲಣ್ಣ ಮಡಿದು ಮೀಸೆಬಂದ ಮಕ್ಕಳು
ಮನೆÀ ಬೇರೆ ಹೂಡಿ ತುಂಬಿದಂತಿದ್ದ
ಮನೆ ಈಗ ಬರಿದು.
ದಸಾಕಿ ಹಾಲುಮಾರಿ ಬದುಕುವ ಪಟ್ಟಮ್ಮಜ್ಜಿ
ಕೊರಳ ಕಾಸಿನ ಸರಕ್ಕೆ
ಕೈಹಾಕಿದವನಿಗೆ ಮುರಿದಿದ್ದಾಳೆ ಕೈಯಿ.
ರಾತ್ರಿ ಹೆಂಚಿನಮೇಲೆ ಸದ್ದಾದಾಗ
ಕೈÉಗೆತ್ತಿಕೊಂಡದ್ದು ಡೊಣ್ಣೆಯಲ್ಲ, ಮಚ್ಚುಗತಿ ್ತ!
ಯಾರೋ ಅವನು ಭೋಸುಡಿ ಮಗ£
ಆವಾಜು ಹಾಕಿದ್ದೇ ತಡ ಹಿತ್ತಲಿಗೆ ಧುಮುಕಿzವÀನ
ಎದುರಿಗೆ ಮಚ್ಚುಗತ್ತಿ ಹಿಡಿದು ನಿಂತಿದ್ದಳು ಕಾಳಿ!
ಇವತ್ತೇ ಏಕೋ ಪುಟ್ಟಮ್ಮಜ್ಜಿಯ ನೆನಪು.
ಕಳೆದ ವರ್ಷವಷ್ಟೇ ತೊಂಬತ್ತೈದರಲ್ಲಿ
ರಾತ್ರಿ ಉಂಡು ಮಲಗಿದಾಕೆ ಮತ್ತೆ ಏಳಲಿಲ್ಲವಂತೆ.
ಕನಸಿನಲ್ಲಿರಲಿ ಹಗಲಲ್ಲೂ ಕಾಡುವ ಚಿತ್ರ.

ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.
ಗೋಹರ್ ಬಾಯಿ ಕರ್ನಾಟಕಿಯವರ ಬಗ್ಗೆ ರಹಮತ್ ತರೀಕೆರೆ ಅವರು ಬರೆದಿರುವ ವಿಸ್ತೃತ ಲೇಖನ ಬಹಳ ಚೆನ್ನಾಗಿದೆ. ಅಪರೂಪದ ಪ್ರತಿಭೆಯ ಸಮಗ್ರ ಪರಿಚಯವನ್ನು ಪಡೆದಂತಾಯಿತು. ಅಮೀರ್ ಬಾಯಿ ಕರ್ನಾಟಕಿ ಅವರ ಸ್ಮರಣೆಯಲ್ಲಿ ವಿಜಾಪುರದಲ್ಲಿ ಕಟ್ಟಿ ದ್ದ ಅಮೀರ್ ಟಾಕೀಸ್ ಎಂಬ ಥಿಯೇಟರ್ ಇಂದಿಗೂ ಇದೆ.