ಕವನ ಪವನ/ ಬರೀ ಬಯಲು- ಪದ್ಮಾ ಟಿ. ಚಿನ್ಮಯಿ

ಬರೀ ಬಯಲು

ಝುಳು ಝುಳು ನೂಪುರ ಹೆಜ್ಜೆ
ಹೆಜ್ಜೆಯ ಒಳಗೆ ಹಚ್ಚ ಹಸಿರ ಮೂಡಿಸಿ
ಹರಿದು ಹೊರಟಿದ್ದೆ ಮಿಂಚಿನ ವೇಗ ನಿನ್ನ ಹರವು
ಹರವಿಗೆ ಎಲ್ಲವೂ ಕೊಚ್ಚಿದೆ ಈ ಕಡಲೂ

ಕಡಲ ಕಿನ್ನರ ಕಿಂಕರ ಸದ್ದು
ಸದ್ದ ಒಳಗೆ ಅಡಗಿದೆ
ನದಿಯ ನೂಪುರದ ಸದ್ದು
ಕುದಿವ ಬೆದೆ ಮೇಲೆ ಒಳಗೆ ಸಾವಿರ ಸಾವಿರ
ಜೀವಜಂತು ವಿಷಜಂತು
ಅದರೊಳಗಿನ ಮುತ್ತು
ಒಡಲ ತುಂಬೆಲ್ಲ ಬಯಲು ಬರೀ ಬಯಲು

ಸುಖದ ಮೊರೆತವೊ
ಅದುಮಲಾಗದ ದುಃಖವೊ ಮಲಯದ ಬಡಿತವೊ
ಮೊರೆತು ಮೊರೆತು ಬೆರೆತು ಮೊಳೆತು ಮತ್ತೆ
ಮೊರೆಯುವ ಕಡಲೆ

ಮೊರೆವ ನಿನ್ನ ಸದ್ದಡಗಲು
ಇಳೆಯ ತುಂಬೆಲ್ಲಾ ಹರಿದು
ಹಸಿರ ಚಿತ್ತಾರ ಮೂಡಿಸಿ ಬಸವಳಿದು ಬಳಲಿ ಬಂದ
ಮಳೆಯ ತಂಪು ತಂಪಿನ
ಗುಂಪಿನಲ್ಲಿ ಕಡಲು ಕ್ಷಣ ಕಣ್ಮುಚ್ಚಿ ಶಾಂತತೆಯ ಒಳಗೆ
ಆತ್ಮಾನಂದ ರತಿಯ ಒಳಗೆ
ನೀನೇ ನೀನಾದೆ ಕಡೆಗೂ ನೀನೇ ಮೇಲಾದೆ

  • ಪದ್ಮಾ ಟಿ. ಚಿನ್ಮಯಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *