ಕವನ ಪವನ/ ನಿಮ್ಮ ಮನೆ ಮಗಳು – ಕುಂಕುಮಾ ಕೊಡ್ಲೆಕೆರೆ

ನಿಮ್ಮ ಮನೆ ಮಗಳು

ಇಷ್ಟು ಜೋರು ಮಾತಾಡುವವಳು ನಾಳೆ ಮಾತು ಕೇಳಳು 

ಅವಳು ಬೇರೆ ಮನೆಗೆ ಹೋಗುವವಳು!

ಬೆಳಗ್ಗೆ ಏಳು ಗಂಟೆಯಾದರೂ ಅವಳು ಏಳುವುದಿಲ್ಲ 

ಎದ್ದ ಮೇಲೆ ಅಂಗಳ ಗುಡಿಸುವುದಿಲ್ಲ 

ಅಡುಗೆ ಬಗ್ಗೆ ಕೇಳುವ ಮಾತೇ ಇಲ್ಲ 

ಅವಳು ಬೇರೆ ಮನೆಗೆ ಹೋಗುವವಳು! 

ದೋಸೆ , ಚಹಾ ಬಿಸಿಯೇ ಬೇಕು 

ಡ್ರೆಸ್ಸು ಗಳ  ಕಪಾಟು ಇದೆ ನಾಕು 

ಎಲ್ಲಾ ಹೈ ಫೈ ಟಾಕು 

ಅವಳು ಬೇರೆ ಮನೆಗೆ ಹೋಗುವವಳು!

ಕಾರು ಓಡಿಸುತ್ತಾಳೆ 

ತನ್ನ ಖರ್ಚು ತಾನೇ ನೋಡಿಕೊಳ್ಳುತ್ತಾಳೆ   

ಮೊನ್ನೆ ಆಫೀಸ್ ಕೆಲಸಕ್ಕೆ ಜರ್ಮನಿಗೆ ಹೋಗಿ ಬಂದಿದ್ದಾಳೆ 

ಅವಳು ಬೇರೆ ಮನೆಗೆ ಹೋಗುವವಳು! 

ಚಿನ್ನದ ಒಡವೆಯ ಆಸೆ ಅವಳಿಗಿಲ್ಲ  

ಅವಳ ಸ್ನೇಹಿತರು ಯಾರ್ಯಾರು ದೇವರೇ ಬಲ್ಲ! 

ಬೈದರೆ ಈಗೀಗ  ಕೋಪವೂ  ಬರುವುದಿಲ್ಲ  

ಅವಳು ಬೇರೆ ಮನೆಗೆ ಹೋಗುವವಳು!

“ಯೂ ಟ್ಯೂಬ್ ನೋಡಿ ನಾನೇ ಅಡುಗೆ ಮಾಡುವೆ 

ಅಡುಗೆ ಕೆಟ್ಟರೆ ಸ್ವಿಗ್ಗಿ,  ಝೋಮೆಟೊ ಇವೆ 

ಎಲ್ಲ ಹೊಣೆಗಳ ಹೊರುವೆ , ಈ ಮನೆಯ ಮಗಳು    

ಆದರೆ ಬೇರೆ ಮನೆಗೆ ಹೋಗುವವಳು!”

ಕುಂಕುಮಾ ಕೊಡ್ಲೆಕೆರೆ 

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *