ನಿನ್ನ ಹೆಸರಿನ ಅಕ್ಷರ – ಮೆಹಬೂಬ ಮುಲ್ತಾನಿ
ಕಿಟಕಿಯಾಚೆ ಮಂಜಿನ ಗೆರೆಗಳಿವೆ
ಆಸೆಗಳಿಂದೇಳುವ ಅನುಲೇಪನಗಳ ಜಾರಿಯಂತೆ.
ನರ್ತನದ ಕೊನೆಯ ಹೆಜ್ಜೆಯ ಬಳುಕಿನ ನಂತರ
ರೆಂಬೆಗಳ ಮೇಲೆ ಜೀಕುತ್ತಿರುವ ಗುಬ್ಬಿಗಳು ಹಾಡಿದವು
ಯಾವುದೋ ಹಾಡಿನ ಚರಣದ ಮೊದಲ ಸಾಲ…
ಬೆರಳಿನಿಂದ ನುಸುಳಿ
ತಂಪಾದ ರಜಾಯಿಯ ಮೇಲೆ ಜಾರಿದ
ಮೊಬೈಲ್ನಿಂದ ನಿನ್ನ ಹೆಸರಿನ ಮೊದಲ ಅಕ್ಷರದ ಮುಂದೆ ಏನೂ ಬರೆಯಲಾಗುತ್ತಿಲ್ಲ….
ಗೋಡೆಗಳ ಮೇಲೆ ನಿನ್ನ ನೆನಪಿನ ಆದೇಶ ಪತ್ರ ಅಂಟಿಸಿದ ಹಾಗೆ
ರಜಾಯಿ ಒಳಗೆ ನಿನ್ನ ಪ್ರೀತಿಯ ನಿರ್ಲಿಪ್ತ ಭಾವ.
ಎಲ್ಲವನ್ನು ನಿನಗೆ ಹೇಳಬೇಕೆನಿಸಿದೆ
ಆದರೆ,
ಮಾತು ಸೋತು ಹೋಗುತ್ತಿವೆ
ನಿನ್ನ ಹೆಸರಿನ ಅಕ್ಷರದ ಮುಂದೆ..
ಮೂಲ:ಹಿಂದಿ:ಕೇಶವ ಚೌಧರಿ
ಅನುವಾದ:ಮೆಹಬೂಬ ಮುಲ್ತಾನಿ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.