ನಾ ಅರಿತಾಗ – ಬಸವಂತಿ ಕೋಟೂರ
ಬೆಳದಿಂಗಳಾಗಿ ಬಂದೆ
ಇಂಚಿಂಚು ನಂದೆಂದು ಅರಿತು ಬೆರೆತೆ
ಬದುಕಿನ ಬವಣೆಗೆ ಎದೆಯೊಡ್ಡಿ ದುಡಿದು ಹಣ್ಣಾದೆ
ಕಪಟ ನಾಟಕಕೆ ಬಲಿಪಶು ನಾನಾದೆ
ಒಳಿತು ಕಾಣದಾದಾಗ ಕಂಡದ್ದು
ಬರಿ ಹೊಲಸು…
ನಾ ಅರಿತಾಗ ಬದುಕು ದೂರ ಸವೆದಿತ್ತು
ನನ್ನೆದೆನ್ನುವುದಿಲ್ಲಿಲ್ಲ ಎಂದೆನಿಸಿ ಹೊರಬಂದೆ
ಬಟ್ಟ ಬಯಲು ಮೇಲೆ ಆಕಾಶ ಕೆಳಗೆ ಭೂಮಿ
ಉರಿ ಬಿಸಿಲ ಧಗೆ ಬಂಗಾರ ಹೊಳಪ ಕಿರಣ
ನನ್ನತ್ತ ಚಾಚಿದಾಗ ಗಟ್ಟಿಯಾಗಿ ಹಿಡಿದೆ
ಹೋದ ಜೀವ ಮರಳಿತು
ನಾನಾದೆ ಮರಳಗಾಡಿನ
ಓಯಾಸೀಸ್….
ಏಳುತ್ತ ಬೀಳುತ್ತ ಮುಗ್ಗರಿಸುತ್ತ
ಮೇಲೆದ್ದು ನಿಂತೆ…
ಮೆತ್ತಿಕೊಂಡ ಹೊಲಸು
ಒಮ್ಮೆ ಕೊಡವಿಕೊಂಡೆ
ಸ್ವಚ್ಚ ಪರಿಶುದ್ಧ ಮನಸ್ಸು
ನಾನರಿತು ನಾನಾದೆ
ಸ್ವಚ್ಛಂದ ಹಕ್ಕಿಯಂತಾದೆ

ಬಸವಂತಿ ಕೋಟೂರ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.