ನಾನೊಲ್ಲೆ ಪದ – ವೈದೇಹಿ
ಲೋಲಕು ತಕಳೇ,
ನಾನೊಲ್ಲೆ
ನೆಕಲೇಸು ತಕಳೇ,
ನಾನೊಲ್ಲೆ
ಪಟ್ಟೆ ಪೀತಾಂಬರ?
ನಾನೊಲ್ಲೆ
ಉಂಗುರ ಬಳೆ ಇಕ
ಒಲ್ಲೆ ಒಲ್ಲೆ
ನವರತ್ನಗಳು ವಜ್ರಪಡಿ,
ಇಕೊ ಬೆಳ್ಳಿ ಪಾತ್ರೆ ಪರಡಿ
ಬೇಡಪ್ಪಾ ನಾನೊಲ್ಲೆನೊ ಒಲ್ಲೆ
ಇನ್ನೆನ್ಬೇಕೇ ಮತ್ತೆ
ಹೇಳೇ ಹೇಸರ ಕತ್ತೆ
ಬಾಗಿಲು ತೆರೆಯಿರಿ,
ತೆರೆಯಿರಿ ಬಾಗಿಲು
ಗಾಳಿ ಬೇಕು ನನಗೆ
ಬೆಳಕು ಬೇಕು ನನಗೆ
ನನ್ನಷ್ಟಕೇ ನಾ ನನ್ನುಸಿರಾಡುವೆ
ಬಿಡಿ ನನ್ನನು ನನಗೆ
ವೈದೇಹಿ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.
Vaidehi’s poem ‘nanolle pada’ is brilliant!
What a simple and great message !!!
Congrats!
Susheela
ತುಂಬ ಇಷ್ಟವಾಯಿತು ನಿಮ್ಮ ‘ನಾನೊಲ್ಲೆ’ ಕವನ.ಎಷ್ಟು ಸುಂದರವಾಗಿ ಹೇಳಿದಿರಿ?