Uncategorizedದೇಶಕಾಲ

ದೇಶಕಾಲ/ ಭಾರತದ ಮೊತ್ತಮೊದಲ ಶಿಕ್ಷಕಿ ಸಾವಿತ್ರಿಬಾಯಿ – ಕೃಷ್ಣಾಬಾಯಿ ಹಾಗಲವಾಡಿ

ಜನವರಿ 3 ಕ್ಷರ ಗುರು ಸಾವಿತ್ರಿಬಾಯಿ ಫುಲೆಯವರ ಜನುಮ ದಿನ. ಪ್ರತಿಯೊಬ್ಬ ಅಕ್ಷರಸ್ಥ ಮಹಿಳೆಯು ಅವರನ್ನು ಸ್ಮರಿಸುವ ದಿನ. ಮಹಿಳೆಯರಿಗೆ ಶೂದ್ರರಿಗೆ, ಅಸ್ಪøಶ್ಯರಿಗೆ ಅಕ್ಷರ ಕಲಿಸಿದ ಭಾರತದ ಮೊದಲ ಶಿಕ್ಷಕಿ. ಸಾವಿತ್ರಿಬಾಯಿ ಮಹಿಳಾ ಶಿಕ್ಷಣದ ಜೊತೆಗೆ ಮಹಿಳಾ ಸಬಲೀಕರಣಕ್ಕಾಗಿ ಅಪಾರ ಕೊಡುಗೆ ನೀಡಿದ್ದಾರೆ. ಇದು ಭಾರತೀಯ ಹೆಣ್ಣು ಮಕ್ಕಳ ಶತ ಶತಮಾನದ ದಾಸ್ಯದ ಬಿಡುಗಡೆಯ ಮೊದಲ ಹೆಜ್ಜೆಯಾಯಿತು.

ಮಹಾರಾಷ್ಟ್ರದ ಸಾವಿತ್ರಿಬಾಯಿಗೆ ತನ್ನ 8ನೇ ವರ್ಷದಲ್ಲಿ 12 ವರ್ಷದ ಜ್ಯೋತಿಬಾ ಫುಲೆಯವರೊಂದಿಗೆ ಬಾಲ್ಯ ವಿವಾಹ ನೆರವೇರಿತು. ಅನಕ್ಷರಸ್ಥ ಪತ್ನಿಗೆ ಪತಿಯೇ ಓದು ಬರಹ ಕಲಿಸಿ ಮುಂದಿನ ವಿದ್ಯಾಭ್ಯಾಸಕ್ಕೂ ಮಾರ್ಗದರ್ಶಕರಾದರು. ಮಹಿಳೆಯರ ದಾರುಣ ಸ್ಥಿತಿಗೆ ಅನಕ್ಷರತೆಯೆ ಕಾರಣವೆಂದು ಶಿಕ್ಷಣ ತರಬೇತಿಯನ್ನು ಕೊಡಿಸಿದರು. 1848ರಲ್ಲಿ ಮೊಟ್ಟಮೊದಲ ಹೆಣ್ಣು ಮಕ್ಕಳ ಶಾಲೆಯನ್ನು ತೆರೆದರು. ಸಾವಿತ್ರಿ ಬಾಯಿಯವರು ಭಾರತದ ಮೊಟ್ಟ ಮೊದಲ ಶಿಕ್ಷಕಿ ಹಾಗೂ ಮುಖ್ಯೋಪಾಧ್ಯಾಯಿನಿಯಾದರು. ಇವರ ಬೋಧನೆ ವಿದ್ಯಾರ್ಥಿಗಳ ಪೋಷಕರ ಹಾಗೂ ಇನ್ಪೆ ಪೆಕ್ಟರುಗಳ ಮೆಚ್ಚುಗೆಗೆ ಪಾತ್ರವಾಗಿತ್ತು. ಸಾಂಪ್ರದಾಯ ಶಿಕ್ಷಣಕ್ಕೆ ಬದಲಾಗಿ ಸಮಾಜ, ವಿಜ್ಞಾನ, ಗಣಿತ, ಮರಾಠಿ, ಹಾಗೂ ಇಂಗ್ಲೀಷ್ ವಿಷಯಗಳನ್ನು ಬೋಧಿಸುತ್ತಿದ್ದರು. ಸರ್ಕಾರದಿಂದ ಮಾದರಿ ಶಿಕ್ಷಕಿ ಎಂದು ಪ್ರಶಸ್ತಿಯನ್ನು ಪಡೆದಿದ್ದರು.

ಶಾಲೆಯನ್ನು ಅರ್ಧದಲ್ಲಿ ತೊರೆಯುವ, ಗೈರು ಹಾಜರಾಗುವ ವಿದ್ಯಾರ್ಥಿಗಳಿಗೆ ಮನೆಯಿಂದˉ ಫುಲೆ ಊಟವನ್ನು ತಯಾರಿಸಿಕೊಂಡು ಹೋಗುತ್ತಿದ್ದರು. ಮಕ್ಕಳನ್ನು ಪ್ರೋತ್ಸಾಹಿಸಲು ವಿದ್ಯಾರ್ಥಿ ವೇತನ, ವಿದ್ಯಾಭ್ಯಾಸದ ನಂತರ ವೃತ್ತಿ ಶಿಕ್ಷಣದ ತರಬೇತಿಯನ್ನು ನೀಡುತ್ತಿದ್ದರು. ಜನ ಸೇರುವ ಕಡೆಗಳಲ್ಲಿ ಹೋಗಿ “ಅಜ್ಞಾನದ ರೋಗಕ್ಕೆ ಜ್ಞಾನವೇ ಔಷಧ, ಅಕ್ಷರ ಜ್ಞಾನದಿಂದ ಮಾತ್ರ ಇದು ಸಾದ್ಯವಾಗುತ್ತದೆ. ಶಾಲೆಗೆ ಬಂದು ಶಿಕ್ಷಣ ಕಲಿಯಿರಿ” ಎಂದು ಶಿಕ್ಷಣದ ಮಹತ್ವವನ್ನು ತಿಳಿಸಿ ಹೇಳುತ್ತಿದ್ದರು.

ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಸಂದರ್ಭದಲ್ಲಿ ಧರ್ಮಾಂಧರಿಂದ ಅನೇಕ ಕಷ್ಟಗಳನ್ನು ಸಹಿಸಬೇಕಾಯಿತು. ಸಾವಿತ್ರಿಬಾಯಿಯವರು ಧರ್ಮ ದ್ರೋಹ ಮಾಡುತ್ತಿರುವರೆಂದು ಅಪಪ್ರಚಾರ ಮಾಡಿದರು. ಅಶ್ಲೀಲ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದರು. ಅವರ ಮೈಮೇಲೆ ಸಗಣಿಯನ್ನು ಎರಚುತ್ತಿದ್ದರು. ಕಲ್ಲು
ಮಣ್ಣುಗಳನ್ನು ತೂರುತ್ತಿದ್ದರು. ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಎಲ್ಲವನ್ನು ಸಹಿಸಿದ ಅವರು ಮಾರನೇ ದಿನದಿಂದ ಒಂದು ಹೆಚ್ಚುವರಿ ಸೀರೆಯನ್ನು ಮೈಮೆಲೆ ಬ್ಯಾಗಿನಲ್ಲಿ ಇಟ್ಟುಕೊಂಡು ಹೋಗುತ್ತಿದ್ದರು. ಸಗಣಿಮಯವಾದ ಸೀರೆಯನ್ನು ಮಕ್ಕಳು ಬರುವುದರೊಳಗೆ ಸ್ವಚ್ಛಗೊಳಿಸಿ, ತಾವು ಮನೆಯಿಂದ ತಂದಿದ್ದ ಸೀರೆಯನ್ನು ಉಡುತ್ತಿದ್ದರು. ಒಮ್ಮೆ ಸಗಣಿ ಎಸೆಯುತ್ತಿದ್ದವನನ್ನು ಹಿಡಿದು ಬುದ್ಧಿ ಹೇಳಿದಾಗ ಸಗಣಿ ಎಸೆಯುವುದನ್ನು ನಿಲ್ಲಿಸಿದನು. ಪುಣೆಯಲ್ಲಿ ಒಬ್ಬ ಹಿಂದು ಮಹಿಳೆ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಸುದ್ದಿಯು ಇಂಗ್ಲೆಂಡಿನ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾಯಿತು. ಇದು ಭಾರತೀಯ ಹೆಣ್ಣು ಮಕ್ಕಳ ಶತ ಶತಮಾನದ ದಾಸ್ಯದ ಬಿಡುಗಡೆಯ ಮೊದಲ ಹೆಜ್ಜೆಯಾಯಿತು.

ಸಾವಿತ್ರಿಬಾಯಿ ಹಾಗೂ ಜ್ಯೋತಿಬಾ ಫುಲೆಯವರು ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಿ, ಸಮಾಜದಲ್ಲಿ ಸಮಾನತೆಯನ್ನು ತರಲು ಮಾಂಗ್ಸ್ ಮತ್ತು ಮಹಾರ್ ಜನಾಂಗದ ಮಕ್ಕಳಿಗಾಗಿ, ವಯಸ್ಕರಿಗಾಗಿ, ರೈತರು, ಹಾಗೂ ಕಾರ್ಮಿಕರಿಗಾಗಿ ಶಾಲೆಗಳನ್ನು ತೆರೆದರು. 1948 ರಿಂದ 1852ರ ವರೆಗೆ ಪುಣೆ, ಸತಾರಾ, ಹಾಗೂ ಅಹಮ್ಮದ್ ನಗರಗಳಲ್ಲಿ 18 ಶಾಲೆಗಳನ್ನು ತೆರೆದರು. ಸಾವಿತ್ರಿಬಾಯಿಯವರು ಶಾಲೆ ತೆರೆಯಲು ಆಭರಣಗಳನ್ನು ನೀಡಿದರು, ವೇತನವನ್ನೂ ಪಡೆಯದೆ ವಿದ್ಯಾದಾನ ಮಾಡುತ್ತಿದ್ದರು. ಅವರ ಪತಿ ಜ್ಯೋತಿಬಾ ಫುಲೆಯವರು ತಮ್ಮ ಎಲ್ಲ ಸಂಪಾದನೆಯನ್ನೂ ಶಾಲೆಯನ್ನು ತೆರೆಯಲು ಹಾಗೂ ಸಮಾಜ ಸುಧಾರಣೆಗಾಗಿ ವಿನಿಯೋಗಿಸಿದರು.

ಸಾವಿತ್ರಿಬಾಯಿ ಫುಲೆ ಮಹಿಳಾ ಶಿಕ್ಷಣದ ಜೊತೆಗೆ ಮಹಿಳಾ ಸಬಲೀಕರಣಕ್ಕಾಗಿ ಅಪಾರ ಕೊಡುಗೆ ನೀಡಿದ್ದಾರೆ. ಬಾಲ್ಯವಿವಾಹ, ಬಹುಪತ್ನಿತ್ವ, ವಯಸ್ಸಾದವರೊಡನೆ ಹೆಣ್ಣು ಮಕ್ಕಳ ವಿವಾಹ, ವಿಧವೆಯರ ಕೇಶ ಮಂಡನ ವಿಧವೆಯರು ಅನುಭವಿಸುತ್ತಿದ್ದ ದೌರ್ಜನ್ಯಗಳ ವಿರುದ್ಧ ಹೋರಾಡಿದರು, ವಿಧವಾ ಗರ್ಭವತಿಯರು ಮಾಡುತ್ತಿದ್ದ ಭ್ರೂಣ ಹತ್ಯೆ ಶಿಶು ಹತ್ಯೆಗಳನ್ನು ತಡೆಯಲು ಬಾಲಹತ್ಯೆ ಪ್ರತಿ ಬಂಧಕ ಗೃಹಗಳನ್ನು ಸ್ಥಾಪಿಸಿದರು. ಅನಾಥ ಮಕ್ಕಳಿಗಾಗಿ ಅನಾಥಾಯಗಳನ್ನು ತೆರೆದರು.

ಸಾವಿತ್ರಿಬಾಯಿ ಫುಲೆ ಸಮಾಜಕ್ಕೆ ಸಲ್ಲಿಸಿದ ಸೇವೆ ಅಪಾರ, ಅಸ್ಪøಶ್ಯರಿಗೆ ನೀರಿಗಾಗಿ ತಮ್ಮ ಖಾಸಗಿ ಜಮೀನಿನಲ್ಲಿ ಬಾವಿ ತೋಡಿಸಿಕೊಟ್ಟರು. 1870ರಲ್ಲಿ ಮಹಾರಾಷ್ಟ್ರದಲ್ಲಿ ಭೀಕರ ಕ್ಷಾಮ ಬಂದಾಗ ಅನೇಕ ಧಾನ್ಯ ವಿತರಣಾ ಕೇಂದ್ರಗಳನ್ನು ತೆರೆದರು. ಮಹಿಳಾ ಮಂಡಲವನ್ನು ಸ್ಥಾಪಿಸಿ ವಿಧವೆಯರಿಗೆ ಪುನರ್ ವಿವಾಹ ನೆರವೇರಿಸಿದರು. ಜೋತಿಬಾ ಫುಲೆಯವರೊಡನೆ ಸೇರಿ ಸತ್ಯ ಶೋಧಕ ಸಮಾಜವನ್ನು ವೈಚಾರಿಕ ನೆಲೆಗಟ್ಟಿನ ಮೇಲೆ ಸ್ಥಾಪಿಸಿ ಅಂತರ್ ಜಾತಿಯ ವಿವಾಹ, ಪುರೋಹಿತರಿಲ್ಲದ, ವರದಕ್ಷಿಣೆ ಇಲ್ಲದ ಸರಳ ವಿವಾಹಗಳನ್ನು ನರವೇರಿಸಿದರು. 1897ರಲ್ಲಿ ಪ್ಲೇಗ್ ರೋಗಿಗಳನ್ನು ಉಪಚರಿಸುವಾಗ ಪ್ಲೇಗ್ ರೋಗಕೆ ಕ ತಾವೇ ತುತ್ತಾಗಿ 10-03-1897ರಲ್ಲಿ ಇಹˉÉೂೀಕ ತ್ಯಜಿಸಿದರು.

ಅಪರೂಪದ ಆದರ್ಶ ದಂಪತಿಗಳಾಗಿದ್ದ ಸಾವಿತ್ರಿಬಾಯಿ ಹಾಗೂ ಜ್ಯೋತಿಬಾ ಫುಲೆಯವರು ಸಮಾಜ ಸುಧಾರಣೆಯ ದೀಕ್ಷೆಯನ್ನು ತಮಗೆ ತಾವೇ ಕೈಗೊಂಡು ಸಮಾಜ ಸುಧಾರಕರೆನಿಸಿಕೊಂಡರು. ಅಕ್ಷರ ಮಾತೆ ಸಾವಿತ್ರಿಬಾಯಿ (03-01-1831 – 10-03-1897) ಹೆಣ್ಣು ಮಕ್ಕಳ ಪಾಲಿಗೆ ಜ್ಞಾನದಾತೆಯಾದರು.

ಕೃಷ್ಣಾಬಾಯಿ ಹಾಗಲವಾಡಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *