ದೇವಲೋಕದ ಪುಷ್ಪ – ನಳಿನಾ ಡಿ.
ಗರ್ವದ ಠೀವಿಯಲಿ, ಸುತ್ತ ನೋಡುವೆ ಈಗ,
ಎಲ್ಲೆಲ್ಲೂ ಹೊಸ ಹಸಿರು ಮೂಡಿಹುದು,
ದೂರದ ಕಾಜಾಣ, ಕೋಗಿಲೆಯು ಮನೆಯ ಮುಂದಿನ ಮರದಿ ಬೀಡು ಬಿಟ್ಟಿಹುದು,
ಇರುವುದೇ ಲೇಸೆಮಗೆ, ಇರದಿದುದ ತಾ ಎನೆವು,
ಬದುಕೆಂಬುದು ಸುಖದ ಹಾದಿ ತೆರೆದಿಹುದು,
ಕಾಡ ಹಾದಿಯ ಮರೆಸಿ, ನಾಡ ಹತ್ತಿಸಿದೆ ಕಾಲ, ಲೋಕ ಮೈಮೆರೆತಿದೆ ತನ್ನದೇ ಗುಂಗಿನೊಳಗೆ,
ಹೀಗೂ ಆಗಬಹುದೆಂದು ಬಂದಿಹಳು ಯೋಗ ಲಕ್ಷ್ಮೀ
ಶುಕ್ರವಾರವೇ ಭುವಿಗೆ,
ಹಾಡಾಗಿದೆ ಬದುಕು ವಿವಿಧ ರಾಗಗಳಲಿ,
ಬಿಗಿದಿದೆ ಕಂಠ ದೈವಕೃಪೆಗೆ
ಮಡಿಲು ತುಂಬಿದೆ ಮತ್ತೊಂದು ದೇವ ಲೋಕದ ಪುಷ್ಪ

ನಳಿನಾ ಡಿ.
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.