ದೀಪ ತಾ ಬೆಳಕ ತಾ – ವೈದೇಹಿ
ಅಲ್ಲೊಂದು ನೋವು ಇದೆ,
ವೇದನೆಯ ಬಾವು ಇದೆ
ನಿನಗಾಗಿ ಕಾಯುತಿವೆ,
ಭೇಷಜ ಕಾಲ
ಕಣ್ತೆರೆದು ನೋಡೊಮ್ಮೆ,
ಸುತ್ತ ಕತ್ತಲ ಕೋಟೆ
ಕಿಂಡಿಯಿದೆ, ಬೆಳಕಿಲ್ಲ
ಬಾಗಿಲಿದೆ, ತೆರೆದಿಲ್ಲ.
ದೀಪ ತಾ, ಬೆಳಕ ತಾ
ಕದ ತೆರೆಯೆ ಕೀಲಿ ತಾ
ಮಾಯಿಸೋ ಗಾಯವನು
ಮುದದ ಲೇಪವ ಹಚ್ಚಿ
ಹೊಸ ದಾರಿ ತೋರುತಾ
ಕೈ ಹಿಡಿದು ಮುನ್ನಡೆಸೋ
ಹೇ ಪುಣ್ಯಕಾಲ
ವೈದೇಹಿ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.