ಚಿತ್ರಾಂಗದೆ/ ಶಶಿಕಾಂತ್ ಧೋತ್ರೆ ಅವರ ಕಲಾಕೃತಿ
ಮಹಾರಾಷ್ಟ್ರದ ಸೊಲ್ಲಾಪುರದ ಬಳಿಯ ಕಲಾವಿದ ಶಶಿಕಾಂತ ಧೋತ್ರೆ ಏಕಲವ್ಯನಂತೆ ಕಲಾ ಅಭ್ಯಾಸ ಮುಂದುವರಿಸಿದವರು. ಮುಂಬಯಿನ ಪ್ರಸಿದ್ಧ ಜೆ.ಜೆ.ಸ್ಕೂಲ್ ಆಫ್ ಆರ್ಟ್ಸ್‌ಗೆ ಪ್ರವೇಶ ದೊರಕಿದ್ದರೂ ಬಡತನದಿಂದಾಗಿ ಶುಲ್ಕ ಕಟ್ಟಲಾಗದೆ ಮೂರೇ ತಿಂಗಳಿಗೆ ಕಲಾ ಶಿಕ್ಷಣ ಮೊಟಕುಗೊಳಿಸ ಬೇಕಾಯಿತು. ಕಪ್ಪು ಹಾಳೆಯಲ್ಲಿ ಬಣ್ಣದ ಪೆನ್ಸಿಲಿನಲ್ಲಿ ಚಿತ್ರ ಬರೆಯುವುದು ಅವರ ವೈಶಿಷ್ಟ್ಯ.
ಕಪ್ಪು ಕಾಗದ ಮತ್ತು ಬಣ್ಣದ ಪೆನ್ಸಿಲೇ ಯಾಕೆಂದರೆ, ಬಣ್ಣ, ಕ್ಯಾನ್ವಾಸ್ ಕೊಂಡುಕೊಳ್ಳಲು ಕೂಡಾ ಸಾಧ್ಯವಾಗದಷ್ಟೂ ಬಡತನ ಅವರಿಗಿತ್ತು. ಶಶಿಕಾಂತ್ ‘ಜಾಗರ್’ ಅನ್ನುವ ಹೆಸರಿನಲ್ಲಿ ಈಗಾಗಲೇ ದೇಶಾದ್ಯಂತ 40 ಕ್ಕೂ ಹೆಚ್ಚು ನಗರಗಳಲ್ಲಿ ಕಲಾಪ್ರದರ್ಶನ ನಡೆಸಿದ್ದಾರೆ. ಅವರ ಇನ್ನಷ್ಟು ಚಿತ್ರಗಳನ್ನು www.shashikantdhotre.com ನಲ್ಲಿ ನೋಡಬಹುದು.
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.