ಕವನ ಪವನ/ ಹಿಜಾಬ್ ಒಳಗಿನ ಮೀನು
ಕಾಶ್ಮೀರಿ ಮೂಲ : ಅಸಿಯಾ ಜಹೂರ್
ಕನ್ನಡಕ್ಕೆ : ಸಿ.ಎಚ್. ಭಾಗ್ಯ
ನನ್ನ ಹಲ್ಲುಗಳಲ್ಲಿ ಕಚ್ಚಿಕೊಂಡ ಮಡಿಕೆ ಬಟ್ಟೆಯೊಡನೆ ನಾನು ಓಡುತ್ತೇನೆ
ಏಕೆಂದರೆ ನಿನ್ನ ಬಾಂಬ್ ಮೂಸುವ ನಾಯಿಗಳು ನನ್ನನ್ನು ಕಂಡು ಬೊಗಳುತ್ತವೆ
ಬ್ರೂಕ್ಲಿನ್ ಸೇತುವೆಯ ಮೇಲೆ ಆಕಾಶದ ಗುಂಟ ತೇಲಿ ಹೋಗುತ್ತೇನೆ.
ನನ್ನ ತಲೆಯಮೇಲೆ ನಾಗರಗಳು ಭುಸುಗುಡುವುದು ನಿನಗೆ ಕೇಳಬಹುದು:
ನಿನ್ನ ಗುರಾಣಿಯ ಮೇಲೆ ನನ್ನ ಮುದ್ರೆಯೊತ್ತಿರುವೆ,
ನಿನ್ನ ಕದನಗಳಿಗೆ ನನ್ನ ಹಿಜಾಬ್ಅನ್ನು ನೆವ ಮಾಡಿರುವೆ,
ಆದರೆ,ನನ್ನ ಕಣ್ಣುಗಳನ್ನು ದಿಟ್ಟಿಸುವ ಧೈರ್ಯವಿಲ್ಲ ನಿನಗೆ
ದಿಟ್ಟಿಸಿದರೆ ಕಲ್ಲಾಗಿಸುವೆ ನಿನ್ನನ್ನು.

ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.