ಕವನ ಪವನ/ ಹಕ್ಕುದಾರರು – ಅನು: ತೇರಳಿ ಎನ್. ಶೇಖರ್
ಹಕ್ಕುದಾರರು
ದೇಹ ಪತಿಗೆ ಮೀಸಲಾದ ಹಕ್ಕಾಗಿತ್ತು,
ಎದೆಹಾಲು ಮಕ್ಕಳಿಗೂ,
ಸಮಯ ಕುಟುಂಬಕ್ಕೂ,
ಕಣ್ಣೀರು, ಬೆವರು
ಅಡುಗೆ ಮನೆಯಲ್ಲಿ ಅಗತ್ಯವಾಗಿತ್ತು.
ಮುಗುಳುನಗೆ ಅತಿಥಿಗಳಿಗೆ
ಸಂಪಾದನೆ ಗೃಹ ನಿರ್ಮಾಣಕ್ಕೆ
ಆಕಾಶವನ್ನು ನೋಡಬೇಕಾದ್ದಿಲ್ಲವೆಂದೂ…
ಸಮುದ್ರಗಳ ಬಗೆಗೆ ತಿಳಿಯಬೇಕಾದ್ದಿಲ್ಲವೆಂದೂ…
ಆಸೆಗಳಲ್ಲಿ ಮುಳುಗಬೇಕಾದ್ದಿಲ್ಲವೆಂದೂ…
ಯಾರ್ಯಾರೋ ನುಡಿಯುತ್ತಿದ್ದರು.
ಹೀಗಾಗಿ
ಪ್ರಣಯ ಸದಾ
ಕವಿತೆಗಳಾಗಿ
ಹರಿಯಿತು ಅವನೆಡೆಗೆ;
ಅವನು ಎಂದಾದರೂ ಓದಬಹುದೆಂಬ,
ಅರಿಯಬಹುದೆಂಬ, ಸ್ಪರ್ಶಿಸಬಹುದೆಂಬ
ಖಚಿತತೆ ಇರದ
ಅವಳ ಬದುಕಿನ ಹಾಗೆ.
ಮಲಯಾಳಂ ಮೂಲ : ಸಂಧ್ಯಾ. ಇ
ಅನುವಾದ : ತೇರಳಿ ಎನ್. ಶೇಖರ್
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.