ಕವನ ಪವನ / ಷರತ್ತುಗಳು ಅನ್ವಯ! – ಆಶಾ ನಾಗರಾಜ್
ಷರತ್ತುಗಳು ಅನ್ವಯ!
ಅಮ್ಮನ ಮಡಿಲಲ್ಲಿ
ಅಪ್ಪನ ತೋಳಲ್ಲಿ
ಮನೆಯ ಅಂಗಳದಲ್ಲಿ
ನೆರೆಯ ಬಯಲಲ್ಲಿ
ಷರತ್ತುಗಳು ಅನ್ವಯ!
ತರಗತಿಯ ಕೊಠಡಿಯಲ್ಲಿ
ಕಾಲೇಜಿನ ಬಳಗದಲ್ಲಿ
ಸಹಪಾಠಿಗಳ ಸಂಗಡದಲ್ಲಿ
ಸಹೋದ್ಯೋಗಿಗಳ ಸಹವಾಸದಲ್ಲಿ
ಷರತ್ತುಗಳು ಅನ್ವಯ!
ನಡೆಯುವಾಗ, ನೋಡುವಾಗ
ಕೇಳುವಾಗ, ಹೇಳುವಾಗ
ಅಳುವಾಗ, ನಗುವಾಗ
ಮಲಗಿ ನಿದ್ರಿಸುವಾಗ,
ಎಚ್ಚರದ ಸ್ಥಿತಿಯಲ್ಲೂ..
ಷರತ್ತುಗಳು ಅನ್ವಯ!
ನವಮಾಸ ಗರ್ಭ ಸಾಮ್ರಾಜ್ಯದಲಿ
ತಾನೇತಾನಾಗಿ ಹರ್ಷದಲಿ..
ಧರೆಗೆ ಪದಾರ್ಪಣೆ ಮಾಡಿದೆ ಆ ಜೀವ
‘ಹೆಣ್ಣೆಂದು’ ಕರೆದರು ಅದನ್ನು!
ಆಗಿನಿಂದಲೂ ಬೆನ್ನಹತ್ತಿವೆ ಷರತ್ತುಗಳು.
ಈಗಂತು ರಕ್ತಗತವಾಗಿವೆ ಈ ಷರತ್ತುಗಳು.
– ಆಶಾ ನಾಗರಾಜ್
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.
Well written.