ಕವನ ಪವನ/ ಮರೆಯಲಾರೆ ಅಮ್ಮ – ಮಲಿಕಜಾನ್ ಶೇಖ್

ಮರೆಯಲಾರೆ ಅಮ್ಮ

ನವಮಾಸ ನಿನ್ನ ಒಡಲಲ್ಲಿ ಇದ್ದಾಗ
ನೀ ಪಟ್ಟ ಕಷ್ಟ
ಜಗ ನೋಡುವ ಆತುರ ನನಗಿದ್ದಾಗ
ನಿನಗಾದ ಕಷ್ಟ
ನೀ ಮರೆತೆಯಮ್ಮಾ

ಎದೆ ಅಮೃತ ಕುಡಿಸಿ
ಬೆಚ್ಚನೆ ಸ್ನಾನವ ಮಾಡಿಸಿ
ಮಡಿಲಲ್ಲಿ ಆಡಿಸಿ
ಜೋಗುಳ ಹಾಡಿ ಮಲಗಿಸುವಾಗ
ನಾನತ್ತಾಗ ನೀನತ್ತಿದ್ದು
ನೀ ಮರೆತೆಯಮ್ಮಾ

ಬೀಳುತ್ತ ಏಳುತ್ತ ನಡೆಯುವಾಗ
ಕೈಹಿಡಿದು ನಡೆಸಿದೆ ನೀನು
ತೊದಲುತ್ತ ತೊದಲುತ್ತ ನುಡಿಯುವಾಗ
ಮಮತೆಯ ನುಡಿ ನೀ ಹೇಳಿದೆಯಮ್ಮಾ
ಚಂದದಿ ನಡೆದು ಅಂದದಿ ನುಡಿವಾಗ
ನಾನಕ್ಕಾಗ ನೀ ನಕ್ಕಿದ್ದು
ನೀ ಮರೆತೆಯಮ್ಮಾ

ಗುರುವಾಗಿ ನನ್ನ ತಿದ್ದಿ
ಬದುಕ ನಡೆಯ ಗುಟ್ಟು ತಿಳಿಸಿ
ಪ್ರೀತಿ ಪ್ರೇಮದ ಪಾಠ ಹೇಳಿ
ಧೈರ್ಯದಿ ನಾ ಮುನ್ನುಗುವಾಗ
ನನ್ನ ಗೆಲುವಿನಲಿ ನಿನ್ನ ಗೆಲುವು ಕಂಡದ್ದು
ನೀ ಮರೆತೆಯಮ್ಮಾ

ಕಷ್ಟವಿರಲಿ ಸುಖವಿರಲಿ
ಎಷ್ಟೆ ಎತ್ತರಕೆ ನಾನು ಬೆಳೆಯಲಿ
ನೀ ಕಲಿಸಿದ ಪಾಠ
ನೀ ಬಡಿಸಿದ ಊಟ
ನೀ ಮರೆತರೂ
ನಾ ಮರೆಯಲಾರೆ ಅಮ್ಮಾ

-ಮಲಿಕಜಾನ್ ಶೇಖ್
ಅಕ್ಕಲಕೋಟೆ (ಕೊಲ್ಲಾಪುರ, ಸೊಲ್ಲಾಪುರ)

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *