ಕವನ ಪವನ/ ನಾ ಓದಬೇಕು, ಯಾಕಂದ್ರ ನಾ ಹೆಣ್ಣು- ಅನು: -ಶಶಿಕಲಾ ವೀ ಹುಡೇದ
ಇತ್ತೀಚೆಗೆ ನಿಧನರಾದ ಕಮಲಾ ಭಸಿನ್ ಅವರ ಹಿಂದಿ ಕವಿತೆ
ನಾ ಓದಬೇಕು, ಯಾಕಂದ್ರ ನಾ ಹೆಣ್ಣು
ಒಬ್ಬ ತಂದಿ ಮಗಳನ್ನ ಕೇಳತಾನ
” ಓದಬೇಕು, ಓದಬೇಕು!
ಅರೆ ನೀ ಯಾಕ ಓದಬೇಕು?
ಅದಕಂತ ಮಗ ಇರುವಾಗ
ನೀ ಯಾಕ ಓದಬೇಕು?”
ಮಗಳು ತಂದೀಗೆ ಹೇಳತಾಳ-
ಕೇಳತೀಯಂದ್ರ ಹೇಳತೀನಿ ಕೇಳಪ್ಪ ನಾ ಹೆಣ್ಣು
ಅದಕ್ಕ ನಾ ಓದಬೇಕು
ನೀವೆಲ್ಲ ಬ್ಯಾಡಂತೀರಲಾ ಅದಕ್ಕ ನಾ ಓದಬೇಕು
ನನ್ನ ಕನಸು ಒಡ್ಡಮುರದೆದ್ದಾವು ಅದಕ್ಕ ನಾ ಓದಬೇಕು
ಏನಾರ ಸಾಧಿಸಿತೋರ್ಸು ಛಲ ಬಂದೈತಿ ಮನಸಿನ್ಯಾಗ
ಅದಕ್ಕ ನಾ ಓದಬೇಕು
ನಾ ಹೆಣ್ಣು ಅದಕ್ಕ ನಾ ಓದಬೇಕು
ಅವರಿವರ ಬಾಗಿಲಿಗೆ ಎಡತಾಕಬಾರದಲಾ ಅದಕ್ಕ ನಾ ಓದಬೇಕು
ನನ್ನ ಕಾಲ್ಬಲದ ಮ್ಯಾಲ ನಾ ನಡೀಬೇಕು ಅದಕ್ಕ ನಾ ಓದಬೇಕು
ನನ್ನೊಳಗಿನ ಭಯದ ಜೋಡಿ
ಹೋರಾಡಬೇಕು ಅದಕ ನಾ ಓದಬೇಕು
ನನ್ನ ಕೈಯಾರೆ ನಾ ಕಟ್ಟಬೇಕು
ಅದಕ ನಾ ಓದಬೇಕು
ನಾ ಹೆಣ್ಣು ಅದಕ್ಕ ನಾ ಓದಬೇಕು
ಈ ಜೋರು-ಜುಲುಮಿಯಿಂದ ಪಾರಾಗಬೇಕು ಅದಕ ನಾ ಓದಬೇಕು
ಎಷ್ಟೋ ಕಾನೂನು ನಾ ಪರೀಕ್ಷೆ ಮಾಡಬೇಕು ಅದಕ ನಾ ಓದಬೇಕು
ಹೊಸಾ ಧರ್ಮ ನಾ ಹುಟ್ಟಹಾಕಬೇಕು
ಎಲ್ಲಾನೂ ಬದಲಾಯಿಸಬೇಕು ನಾನು
ಅದಕ್ಕ ನಾ ಓದಬೇಕು
ನಾ ಹೆಣ್ಣು ಅದಕ ನಾ ಓದಬೇಕು
ಪ್ರತಿಯೊಬ್ಬ ಜ್ಞಾನಿ ಜತಿ ನಾ ಮಾತಾಡಬೇಕು ಅದಕ್ಕ ನಾ ಓದಬೇಕು
ಮೀರಾ ಕಟ್ಟಿದ ಹಾಡ ಹಾಡಬೇಕು ಅದಕ್ಕ ನಾ ಓದಬೇಕು
ಸ್ವಂತದ್ದೊಂದು ರಾಗ ಹೆಣೀಬೇಕು ಆದಕ ನಾ ಓದಬೇಕು
ಹೆಬ್ಬಟ್ಟಿನವರದಲ್ಲಾ ಈ ಜಗತ್ತು
ಅದಕ್ಕ ನಾ ಓದಬೇಕು
ನಾ ಹೆಣ್ಣು ಅದಕ್ಕ ನಾ ಓದಬೇಕು”
ಕನ್ನಡಕ್ಕೆ: ಶಶಿಕಲಾ ವೀ ಹುಡೇದ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.
ನಾನೂ ನನ್ನ ಅವ್ವನಂಗ್ ಆಗ್ಬೇಕು , ಅದಕ್ ನಾ
ಓದ್ಬೇಕು