ಕವನ ಪವನ/ ನಾನೋರ್ವ ಮುಸ್ಲಿಂ ಮಹಿಳೆ
ನಾನೋರ್ವ ಮುಸ್ಲಿಂ ಮಹಿಳೆ
ಮೂಲ : ಮೌಮಿತಾ ಅಲಂ
ಕನ್ನಡಕ್ಕೆ: ಗಿರಿಜಾ ಕೆ.ಎಸ್.
ನಾನೋರ್ವ ಮುಸ್ಲಿಂ ಮಹಿಳೆ
ಮತ್ತು ನಾ ಮಾರಾಟಕ್ಕಿಲ್ಲ
ಸೋದರರಿಗೆ ತಂಗಿಯಾಗಿ
ಮಕ್ಕಳಿಗೆ ತಾಯಿಯಾಗಿ
ಸಂಗಾತಿಯಾಗಿ
ಆಪ್ತತೆಯಿಂದ ಪೊರೆಯುವ
ಪ್ರೀತಿಯ ಸೂಸುವವಳು
ನಾನೋರ್ವ ಮುಸ್ಲಿಂ ಮಹಿಳೆ
ಮತ್ತು ನಾ ಮಾರಾಟಕ್ಕಿಲ್ಲ
ಬ್ರಿಟಿಷರ ವಿರುದ್ಧ ಹೋರಾಡಿ
ಪ್ರಾಣ ತೆತ್ತವರಲ್ಲಿ ನಾ ಒಬ್ಬಳು
ದೇಶದ ಅನೇಕ ವಿದ್ಯಮಾನದಲ್ಲಿ
ಭಾಗಿ ನಾನು
ಶಾಹೀನ್ ಭಾಗ್ ನಲ್ಲಿ
ಕಾಶ್ಮೀರ, ಮಣಿಪುರದಲ್ಲಿ
ನೀವು ಭಯಪಡುವ
ದನಿ ನಾನು
ನಿಮ್ಮ ಭಯ~ ನನ್ನ ಜಯ
ನಾನೋರ್ವ ಮುಸ್ಲಿಂ ಮಹಿಳೆ
ಮತ್ತು ನಾ ಮಾರಾಟಕ್ಕಿಲ್ಲ
ಇತಿಹಾಸದ ಪುಟಗಳಿಂದ
ಅಳಿಸಬೇಕೆಂದಿರುವ ದನಿ ನಾನೆ
ಆದರೆ
ದಮನಿತರ ಪರವಾಗಿ
ಶೋಷಣೆಯ ವಿರುದ್ಧ
ನಾನಿರುವೆ ಸದಾ
ನಾನೋರ್ವ ಮುಸ್ಲಿಂ ಮಹಿಳೆ
ಮತ್ತು ನಾ ಮಾರಾಟಕ್ಕಿಲ್ಲ
ನಾನೋರ್ವ ನರ್ಸ್, ಡಾಕ್ಟರ್
ಹೋರಾಟಗಾರ್ತಿ, ಬರಹಗಾರ್ತಿ
ವರದಿಗಾರ್ತಿ, ಶಿಕ್ಷಕಿ
ಬುರ್ಖಾದೊಂದಿಗೂ ಇಲ್ಲದೆಯೂ
ದನಿಯಾಗುವೆ
ನಾನೋರ್ವ ಮುಸ್ಲಿಂ ಮಹಿಳೆ
ಮತ್ತು ನಾ ಮಾರಾಟಕ್ಕಿಲ್ಲ
ಹೌದು
ನಾನೋರ್ವ ಮುಸ್ಲಿಂ ಮಹಿಳೆ
ಮತ್ತು ನಾ ಮಾರಾಟಕ್ಕಿಲ್ಲ.
(ಮೂಲ:I am a Muslim Woman)
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.