ಕವನ ಪವನ / ನಾನು ಹೆಣ್ಣು – ಜನನಿ ವತ್ಸಲ
ನಾನು ಹೆಣ್ಣು
ನಾನು ತಾಯಿ
ನಾನು ಅಕ್ಕ
ನಾನು ತಂಗಿ
ನಾನು ಹೆಂಡತಿ
ಇಷ್ಟು ಬಿಂಬದಲ್ಲಿ
ಸದ್ದಿಲ್ಲದೆ ಹೆಜ್ಜೆಯಿಡುವ
ನಿಮ್ಮೆಲ್ಲರ ಉಸಿರಿನಲ್ಲಿ ಬೆರೆತಿರುವ
ನೆರಳು ನಾನು.
ಹೆಣ್ತನಕ್ಕೆ ಯಾವುದೇ ಜಾತಿಯಿಲ್ಲ ಧರ್ಮವಿಲ್ಲ
ಜಗದ ಬೆಳಕಾಗಿ ಮನಗಳ ನೆರಳಾಗಿ
ಸಂಬಂಧಗಳ ಮುಕ್ತಿಯನ್ನೇ ಅರಿಯದೆ
ಉಸಿರಾಗಿರುವ ಹೆಣ್ಣು ನಾನು.
ಹೆತ್ತವರ ಮುಷ್ಟಿಯಿಂದ ಮಗಳಾಗಿ
ಗಂಡನ ಮುಷ್ಟಿಯಿಂದ ಹೆಂಡತಿಯಾಗಿ
ಸಂಬಂಧಗಳ ಬಲೆಯಲ್ಲಿ
ಜನುಮವನ್ನು ಸವೆಸಿ
ಮುಷ್ಟಿಯೊಳಗೆ ಶಕ್ತಿಯಾಗಿ
ಜಗವ ಬೆಳಗುವವಳು
ಅವಳೇ ಹೆಣ್ಣು
ನಾನು ಒಂದು ಹೆಣ್ಣು.
- ಜನನಿ ವತ್ಸಲ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.