ಕವನ ಪವನ/ ನಕ್ಷತ್ರವಾದವರು – ಹೆಚ್. ಆರ್. ಸುಜಾತಾ

ನಕ್ಷತ್ರವಾದವರು
ಹುಟ್ಟಿದ ಮಕ್ಕಳಿಗೆ
ಅಂಬರದಿ ಚಂದ್ರನ ತೋರಿ
ತುತ್ತಿಡುತ್ತಾ
ಬೆಳದಿಂಗಳನ್ನೇ ಬೆಳೆಸುತ್ತಿದ್ದರು
ಇಂದೇಕೆ?
ನಕ್ಷತ್ರ ಬಾನಿಂದ ನೆಲಕ್ಕುದುರಿ
ಭೂಮಿಗೆ ಕೆಂಡದ ಹೊಳೆ ಹರಿಸಿ
ಧಗಧಗನೆ ಹೆಣವನ್ನುರಿಸುತ್ತಿವೆ
ತಾಯ ಕನಸು ಕರಗಿ
ಚಂದ್ರನೇ ತಬ್ಬಲಿಯಾಗಿ
ಭೂತಾಯವ್ವನ ನಿಟ್ಟಿಸುತ್ತಿದ್ದಾನೆ
ಅಪ್ಪಿಕೊಳ್ಳಲು ಹೋದರೆ
ಅವ್ವ ಬೆದರಿ ಮುಟ್ಟು
ತೊಳೆಯುತ್ತಿರುವಳಲ್ಲ !
ಬಚ್ಚಲ ನೀರಲ್ಲಿ
ಹರಿವ ಕೆಂಪುನೀರ ಸೆರಗು
ಹೆದರಿ ತಬ್ಬಲು ಹೋದರೆ
ಗಾಳಿ ನಿಂತ ನೆಲವೇ ಬೆವೆತು
ಆಕ್ರಂದನದ ಕೂಗು
ಊಳಿಡುವ ಆಂಬ್ಯುಲೆನ್ಸ್ ಕೂಗು
ನಿರಂತರ ಗರ್ಭಪಾತ
ಹರಿವ ಹೊಳೆಯ ಮರೆತು
ಉರಿವ ಚಿತೆ

ಹೆಚ್. ಆರ್. ಸುಜಾತಾ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *