ಕವನ ಪವನ/ ತಣ್ಣನೆಯ ತಿರಸ್ಕಾರ – ಎಂ.ಆರ್. ಅನಸೂಯ
ತಣ್ಣನೆಯ ತಿರಸ್ಕಾರ
ಅಗ್ನಿಪರೀಕ್ಷೆಗೆ ಗುರಿಯಾದ ಸೀತೆ
ತೆಗಳಲಿಲ್ಲ ರಾಜಾರಾಮನಾದ
ಸೀತಾರಾಮನನ್ನು.
ಪರಿತ್ಯಕ್ತಳಾಗಿ ಕಾಡುಪಾಲಾದ ಸೀತೆ
ನಿಂದಿಸಲಿಲ್ಲ ರಾಜಾರಾಮನಾದ
ಸೀತಾರಾಮನನ್ನು.
ಹೇಳಿದಳು
ಕರುಣಾಳು ರಾಘವನಲ್ಲಿ ತಪ್ಪಿಲ್ಲ
ಸೀತಾನಿಷ್ಠ ರಾಜಾರಾಮ
ಸೀತಾರಾಮನಾಗಿ ದಕ್ಕಿದ್ದು ಸೀತೆಗೆ ಮಾತ್ರ.
ಪರಿತ್ಯಕ್ತಳು ಸೀತೆ ರಾಜಾರಾಮನಿಂದ
ಪರಿತ್ಯಕ್ತನು ರಾಮ ಸೀತಾಪತಿಯಾಗಿ-
ಸೀತೆಯ ತಣ್ಣನೆಯ ತಿರಸ್ಕಾರ
ಸುಡು ಬೆಂಕಿಗಿಂತಲೂ ಭೀಕರ !
ಎಂ. ಆರ್. ಅನಸೂಯ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.