ಕವನ ಪವನ/ ಛಪಾಕ್ ಚಿತ್ರದ ಗುಲ್ಜಾರ್ ಗೀತೆ- ಅನು: ರೇಣುಕಾ ನಿಡಗುಂದಿ
ಕೋಯಿ ಚೆಹರಾ ಮಿಟಾ ಕೇ ..
ಯಾರೋ ಚೆಹರೆಯ ಕೆಡಿಸಿ ನಿರ್ನಾಮಗೊಳಿಸಿ, ನಾಕು ಹನಿಗಳ ಸಿಡಿಸಿ ಓಡಿದಾ
ಛಪಾಕ್ ಅಂತ ಗುರುತನೇ ಕೊಂಡೊಯ್ದss
ಬಿಸಿಲಿಗೆ ಗ್ರಹಣ ಹಿಡಧಂಗ
ಒಂದಾಣೆ ಬೀಳೂಹಂಗ ಈ ಚೆಹರೆಯೂ
ಬಿದ್ದೋತು
ಛಪಾಕ್ ಅಂತ ಗುರುತನ ಕೊಂಡ್ಹೊದಾ
ಆಸೆಯಿಲ್ಲ , ಬಯಕೀ ಇಲ್ಲಾss
ಅಂಥಾದ್ದೇನೂ ವಚನಾ ಇಲ್ಲಾss
ಕೈಯಾಗ ಕತ್ತಲೇತಿ
ಕಣ್ಣಲ್ಲೆನೋ ಬಯಕೇ ಐತೀ
ಯಾರೋ ಚೆಹರೆಯ ಕೆಡಿಸಿ ನಿರ್ನಾಮಗೊಳಿಸಿ, ನಾಕು ಹನಿಗಳ ಸಿಡಿಸಿ ಓಡಿದಾ
ಛಪಾಕ್ ಅಂತ ಗುರುತನೇ ಕೊಂಡೊಯ್ದss
ಹೊಟ್ಯಾಗೆಂಥ ಕುದಿಯಿತ್ತು
ಬೆಂಕಿಲ್ಲದ ಹೊಗಿಯಿತ್ತು
ಹೊಟ್ಯಾಗೆಂಥ ಕುದಿಯಿತ್ತು
ಬೆಂಕಿಲ್ಲದ ಹೊಗಿಯಿತ್ತು
ಅಬರೂ ಇಲ್ಲ ಖಬರಿಲ್ಲ
ಮಂಕಬುದ್ಧಿ ಕವಿದಿತ್ತss ss
ಯಾರೋ ಮುಖವನೇ ಕೆಡಿಸಿ, ನಿರ್ನಾಮಗೊಳಿಸಿ,ನಾಕು ಹನಿಗಳ ಸಿಡಿಸಿ ಓಡಿದಾ
ಛಪಾಕ್ ಅಂತ ಗುರುತನೇ ಕೊಂಡೊಯ್ದss
ಕನಸಿತ್ತs, ಹುಕೀಯಿತ್ತs, ಎಲ್ಲಾ ಹೆಂಗ ಮಣ್ಮಣ್ಣಾತs
ಎಸೊಕೊಂದ ಜೀಂವಿತ್ತss ದಾರ ನೋಡ ತುಂಡಾತss
ಎಲ್ಲಾss ಸುಟ್ಟೋತss…..
ಯಾರೋ ಮುಖವನೇ ಕೆಡಿಸಿ, ನಿರ್ನಾಮಗೊಳಿಸಿ,ನಾಕು ಹನಿಗಳ ಸಿಡಿಸಿ ಓಡಿದಾ
ಛಪಾಕ್ ಅಂತ ಗುರುತನೇ ಕೊಂಡೊಯ್ದss
ಗುರುತನೇ ಕೊಂಡೊಯ್ದss
ಗುರುತನೇ ಕೊಂಡೊಯ್ದss
ಕನ್ನಡಕ್ಕೆ: ರೇಣುಕಾ ನಿಡಗುಂದಿ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.