ಕವನ ಪವನ / ಕಲ್ಲಾಗಲು… – ಆಶಾ ಜಗದೀಶ್
ಕೊರಳ ಸುತ್ತು ಕಪ್ಪಾಗಿದೆ
ಕಾಲ್ಬೆರಳ ಕತ್ತು ಸಣ್ಣಗಾಗಿದೆ
ಮುಷ್ಟಿ ಮೇಲಿನ ನಾಡಿ ಅವಡುಗಚ್ಚಿ
ಮಿಡಿಯುತ್ತಿದೆ
ಮೂಗಿನ ಮೇಲೆ ಬೆಳೆದ ಹುತ್ತ….
ಟಿಕ್ಕಲಿಯಂಟಿಗೆ ಬಣ್ಣಗೆಟ್ಟ ಚರ್ಮ…
ಇವೆಲ್ಲ ನಮ್ಮ ಆತ್ಮದ ಜರೂರತ್ತು
ಎಂದೆನಿಸುವುದಿಲ್ಲ…
ಒಂದು ಮೆದುಳು
ಒಂದು ಹೃದಯ
ಒಡೆದು ಚೂರಾದರೂ
ಮುತ್ತೈದೆ ಮಹಾಸತಿಯಾಗಬೇಕು
ಕಲ್ಲಾಗಲು…
– ಆಶಾ ಜಗದೀಶ್
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.