ಕವನ ಪವನ/ ಓ ಬೆಳಗಿನ ತಂಗಾಳಿ!- ಅನು: ಸಿ.ಎಚ್. ಭಾಗ್ಯ
ಉರ್ದು ಮೂಲ: ಜಯಂತ್ ಪರ್ ಮಾರ್
ಓ ಬೆಳಗಿನ ತಂಗಾಳಿ!
ಅಲ್ಲೇ ನಿಲ್ಲು,
ನನಗೆ-
ಮೋಡದ ನೆರಳು ಬೀಳದಿರುವ,
ದಿಗಂತದ ಕಪ್ಪು ಕಾಡಿನಲ್ಲಿ
ಎಂದೂ ಮುಳಗದಿರುವ,
ರಕ್ತಗೆಂಪು ಸೂರ್ಯನನ್ನು ಕೊಡು.
ಅದನ್ನು ಶ್ರೀಕೃಷ್ಣನ ಚಕ್ರದಂತೆ
ತೋರುಬೆರಳಿನಲ್ಲಿ ತಿರುಗಿಸುವೆ,
ಯಾರು ನನ್ನ ನಾಲಿಗೆಯನ್ನು ಕತ್ತರಿಸಿ
ಪವಿತ್ರ’ಯಜ್ಞಕುಂಡ’ದಲ್ಲಿ
‘ಓಂ ಸ್ವಾಹಾ’ ಎಂದು ಪಠಿಸಿ
ನಾಶಪಡಿಸಿದರೋ
ಅವರ ಮೇಲೆ,
ಯಾರು ನನ್ನ ಹೂವಿನಂಥ ಹುಡುಗಿಯನ್ನು
ಸುಟ್ಟರೋ
ಅವರ ಮೇಲೆ,
ಯಾರು ನನ್ನ ಸೋದರಿಯ ಎದೆಯಿಂದ
ರಕ್ತದ ಕೋಡಿ ಹರಿಸಿದರೋ
ಅವರ ಮೇಲೆ;
ಯಾರು
ನನ್ನ ತಂದೆಯನ್ನು
ಜೀವಂತ ಹುಗಿದರೋ
ಅವರ ಮೇಲೆ,
ಯಾರು
ನನ್ನ ತಾಯಿಯನ್ನು
ಹಾಡುಹಗಲೇ
ಬೆತ್ತಲೆ ಮಾಡಿದರೋ
ಅವರಮೇಲೆ.
ನನ್ನೊಳಗಿನ ಜ್ವಾಲೆ ಆರುವುದಿಲ್ಲ,
ನನಗೆ ರಕ್ತಗೆಂಪು ಸೂರ್ಯನನ್ನು ಕೊಡು!
ಓ ಬೆಳಗಿನ ತಂಗಾಳಿಯೆ
ನಿಲ್ಲು!
ಕನ್ನಡಕ್ಕೆ: ಸಿ.ಎಚ್.ಭಾಗ್ಯ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.