Uncategorizedಕವನ ಪವನಸಾಹಿತ್ಯ ಸಂಪದ

ಕವನ ಪವನ/ ಎಲ್ಲದರಲ್ಲೂ ಅರ್ಥವಿದೆ – ಅನು: ಭಾಗ್ಯ ಸಿ.ಎಚ್.

ಎಲ್ಲದರಲ್ಲೂ ಅರ್ಥವಿದೆ

ಅಸ್ಸಾಮಿ ಮೂಲ : ನೀಲಮಣಿ ಫೂಕನ್
ಕನ್ನಡಕ್ಕೆ: ಸಿ.ಎಚ್.ಭಾಗ್ಯ


ಎಲ್ಲದರಲ್ಲೂ ಒಂದಲ್ಲ ಒಂದು ಅರ್ಥವಿದೆ.
ಉದಾಹರಣೆ, ಕಾವ್ಯದಲ್ಲಿ,ಪ್ರೀತಿಯಲ್ಲಿ
ಭೂಮಿ, ಬೆಂಕಿ, ಗಾಳಿ, ನೀರು
ಕುರುಡುನಾಯಿಯ ಬೊಗಳುವಿಕೆಯಲ್ಲಿ
ಹುಳುಹುಪ್ಪಟೆಗಳ ಕೀಚ್ ಕೀಚ್ ನಲ್ಲಿ
ರಕ್ತದ ಕಲೆಯಿರುವ ಅಂಗಿಯ ಜೇಬಿನಲ್ಲಿ,
ಎಲ್ಲದರಿಂದಲೂ ಅರ್ಥವನ್ನು ಹೆಕ್ಕಿತೆಗೆಯಬಹುದು.
ಅರ್ಥಗಳ ಕಲ್ಪಿಸುವವನ ಪ್ರತಿ ಬೆರಳತುದಿಯ
ನಕ್ಷತ್ರದಲ್ಲಿ ಅರ್ಥ ಹುದುಗಿದೆ
ಅರ್ಥಗಳ ಆಟ ಮುಂದುವರಿಯುತ್ತದೆ.
ಮಕ್ಕಳ ಶಿಲುಬೆ ಮತ್ತು ಸೊನ್ನೆ ಆಟದಂತೆ
ಘಾಸಿಗೊಂಡ ಪದಗಳು ರಕ್ತ ಮಾಂಸದ ದನಿಯನ್ನು
ಅರಸುತ್ತವೆ.
ಪ್ರೇಮಿಗಳು ಹಾಗೂ ಕವಿಗಳ ಹುಚ್ಚಾಟ ಮುಂದುವರಿಯುತ್ತದೆ.
ಸಂಜೆಯ ಎಲೆಗಳ ಬಿಕ್ಕು
ನಾಲಿಗೆಯ ರಸಸ್ಪರ್ಶಕ್ಕಾಗಿ ಹಾತೊರೆಯುತ್ತವೆ
ಅನಾಮಧೇಯ ಮುದುಕಿಯ ಅಂಗೈಮೇಲೆ
ದೀಪವು ಉರಿಯುತ್ತದೆ.

ಓ,ಸಹೃದಯಿ ಮಾತುಗಾರನೆ
ಈ ದಮನಿತರು ವಂಚಿತರಾದ ಹೆಚ್ಚಿನ ಅರ್ಥಗಳನ್ನು
ನನಗೆ ಕರುಣಿಸು.


Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *