ಕವನ ಪವನ / ಈ ದೇಹ‌ ಯಾರದ್ದು ? ಅನು: ಕೆ.ಪಿ.ಮಂಜುನಾಥ್

ಈ ದೇಹ‌ ಯಾರದ್ದು ?

ನನಗೇಕೋ ಕಾಡುತ್ತಿದೆ
ಈ ಪ್ರಶ್ನೆ ಮತ್ತೆ ಮತ್ತೆ
ಈ ದೇಹ‌ ಯಾರದ್ದು ?
ನೇತಾಡುವ ಹೂಗಳಿಗೆ ಕೊಂಬೆಗಳು
ಮನಸ್ಸನ್ನು ಹೊತ್ತ ದೇಹ
ಈ ದೇಹ ಯಾರಿಗೆ ಸೇರುತ್ತದೆ?
ತಾಯಿ ತಂದೆಯರು ನೀಡಿದ ಈ ದೇಹ
ಅವರದಲ್ಲವೆಂದು ನೀಡುತ್ತಾರೆ ತೀರ್ಪು
ಕೆಲ ದಿನ ಕಳೆದಂತೆ

ಕಟ್ಟಿಕೊಂಡವನು ದೇಹದ ಮೇಲೆ
ನೊಂದಣಿ ಮಾಡಿಸಿದ್ದಾನೆಯೆ?
ಈ ದೇಹವು ತಾಳಿ ಕಟ್ಟಿದವನಿಗಾಗಿ ಹುಟ್ಟಿದ್ದೇನು

ಹೆತ್ತ ಮಕ್ಕಳು ದೇಹವನ್ನು ಕರೆಯುತ್ತಾರೆ…
ನನ್ನ ಅಮ್ಮ ಎಂದು…!
ಹೊಟ್ಟೆಯಲ್ಲಿ ಹುಟ್ಟಿದವರದೆ ನನ್ನ ದೇಹ?

ಯಾರದ್ದು ಈ ದೇಹ ?
ಹೂವನ್ನು ಹೊತ್ತ ರೆಂಬೆಯದೆ‌ ಹೂ ?
ಮನಸ್ಸಿಗೆ ನೇತಾಡುವ ಈ ದೇಹ ?
ಮನಸ್ಸಿಗೆ ಸೇರುತ್ತದೆಯೆ ?
ಮನಸ್ಸಿಗನುಗುಣವಾಗಿ
ಈ ದೇಹ ನಡೆಯುತ್ತದೆಯೆ ?

ನಿಜವಾಗಿ ನನ್ನ ಮನಸ್ಸು ಬದುಕಿದೆಯೆ?
ಈ ದೇಹದಲ್ಲಿ ಸಜೀವ ಸಮಾಧಿ ಮಾಡಿರುವರಲ್ಲವೆ
ಯಾರದ್ದು ಈ ದೇಹ ?

ಯಾರನ್ನು ಕೇಳಿದರೂ ಹೇಳುತ್ತಿಲ್ಲ ?
ದೇಹಗಳು ಸ್ವಂತವೆ ?
ದೇಹಗಳು ಆಸ್ತಿಗಳೆ ?

ದೇಹಕ್ಕೆ ಪ್ರಾಧಾನ್ಯ ‌ಪ್ರಪಂಚದಲ್ಲಿ
ಮನಸ್ಸಿಗೆ ಜೀವಕ್ಕೆ ಇಲ್ಲ
ಅದರೂ ನನಗೆ ಉತ್ತರ ಬೇಕು
ಈ ದೇಹ‌ ನನ್ನದು ಎಂದು ಆಗುತ್ತದೆ?
ಸ್ವಂತವಾಗಿ…
ನಾನು ಇರುವಷ್ಟು ದಿನಗಳು
ನನ್ನ ದೇಹ ನನ್ನ ಅಧೀನಕ್ಕೆ ಎಂದು ಬರುತ್ತದೆ ?

ದೇಹ ದ್ರೋಹಿಗಳೆ…ಉತ್ತರಿಸಿ !

ತೆಲುಗು : ಷಾಜಹಾನ
ಕನ್ನಡಕ್ಕೆ : ಕೆ.ಪಿ.ಮಂಜುನಾಥ್

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *