ಒಲವ ಚಡಪಡಿಕೆ – ಸೈನಾಜ ಮುಲ್ತಾನಿ
ಒಲವೇ …!
ನ್ಯೂಕ್ಲಿಯರ್ ಅಣುವಿಗಿಂತಲೂ ಅಗಾಧ
ಶಕ್ತಿ ನಿನ್ನದು …
ಹೇಳು ನನ್ನ ಈ ಅಸಹಾಯಕತೆಗೆ ಕಾರಣವೇನು…?
ಒಲ್ಲದ ಮನಸಿನಿಂದ ಭಾವನೆಗಳಿಗೆ ವಿರಾಮ
ನೀಡುತ್ತಿರುವೆ…
ಒತ್ತಾಯಪೂರ್ವಕವಾಗಿ ನೆನಪುಗಳ ದಮನ
ಮಾಡುತ್ತಿರುವೆ…
ಏನು ಮಾಡಿದರು ಪ್ರಯೋಜನವಾಗುತ್ತಿಲ್ಲ
ಅದೆಂಥ ಶಕ್ತಿ ಅಡಗಿದೆ …
ಆ ನೆನಪುಗಳಿಗೆ…
ಮರೆಯಲೆಂದು ಮಾಡಿದ ವ್ಯರ್ಥ ಯತ್ನಕೆ
ಸೋತು…
ಮರೆಯಲಾಗದೆ ಮರುಕಳಿಸುತ್ತಿವೆ ಆ ನಿನ್ನ ಮಾತುಗಳು…
ನನ್ನದೇನು ಪ್ರಮಾದ ಹೇಳು ಒಲವೆ…?
ಮಗು ಮನಸಿಗೆ ನಿನ್ನೊಲವೆ ಜೋಗುಳವಂತೆ…
ನಯನಗಳೆ…
ನಿಮ್ಮಲ್ಲಿ ನನ್ನದೊಂದು ವಿನಮ್ರ ವಿನಂತಿ…
ಹೊಡೆಯದಿರಿ ಜೋರಾಗಿ…
ಕಂಬನಿಗಳಲಿ ಸುಂದರ ನೆನಪುಗಳ
ರಾಶಿಯೇ ಇದೆ…
ನಿಮ್ಮ ತಾಕಲಾಟದಿಂದ ಅವು ಕರಗದಿರಲಿ…
ಸೈನಾಜ ಮುಲ್ತಾನಿ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.