ಒಂದು ರಾತ್ರಿಯ ದೀಪ – ನಾಗರಾಜ ಕೋರಿ

ಅವನು ಅವತ್ತು
ಹೇಳಿದ್ದ
ಅವಳು ಅಲ್ಲಿದ್ದಾಳೆಂದು
ಹೋದೆ
ಸಂದಿಗೊಂದಿ ದಾಟಿ

ಅಲ್ಲಿ
ಕಪ್ಪಿಟ್ಟ  ತುಟಿ
ಮಸೆದ ಕತ್ತಿ
ಬರಿ ಸೇಂಟ್ ವಾಸನೆಯಲಿ
ಒಂದಕ್ಕೊಂದು
ಪುಕ್ಕಟೆಯ ಘನಯುದ್ಧ

ಇದ ಸವಿಯಲೆಂದು
ಕುದಿ ಮೊಲೆಗಳ ಕಕ್ಕಸ ನಡುದಾರಿಯಲಿ
ಘಮಲೆಣ್ಣೆ ಬಳಿದು
ಧಾವಂತದ ಹೆಜ್ಜೆ ಇಟ್ಟೆ
ಅಲ್ಲೆ ಚಳಮಳ ಜ್ವರ

ತೇರು ಸಾಗಿತೆಷ್ಟು ದೂರ
ಗಾಲಿ ಮಣಿಯಬೇಕಲ್ಲ
ಸೆರಗ ತುದಿಯಲಾಡಿದ
ಹುರುಪೆಂಬ ಚುಂಗಿ ಗಾಳಿಗೆ

ಸಾಚನಂತೆ
ದಿಕ್ಕರಿಸಲು ನಿಂತೆ
ಇದು ಬಿಟ್ಟಿತೇ
ತಳಮಳಿಸಿ ಕುಣಿಸಿದ
ಮೈ ಹೊಳಪಿನ ನುಣುಚಿಗೆ
ಜಂಘಾಬಲವೇ ನಡುಗಿ ಅಲ್ಲಾಡಿ
ಸಿಟ್ಟಿಗೆದ್ದಿತು

ಮತ್ತೆ ಬಿಟ್ಟೆನೇ
ಮನವೆಂಬ ಮರ್ಕಟವು
ಬಿಡಿಕಿ, ಬೋಗ್‍ಬಡಿ, ಚಿಲ್ಲರೋಳೆ
ಎಂದಬ್ಬರಿಸಿ
ನಿರಿಗೆಯೊಳಗಿನ ತತ್ರಾಣಿ ದೀಗಿಬತ್ತಿಗೆ
ಗುಂಗಾಣಿಯಾಗಿ ಗುನುಗಿ, ಮುಲುಕಿ
ಕೊನೆಗೆ ಸತ್ತುಬಿಟ್ಟೆ
ಆ ರಾತ್ರಿಗೆ ವಯಸ್ಸಾಗಿತ್ತು

ಆಗ
ಅವಳ ತುಟಿ ಮೇಲಾಡಿದ
ಅನಂತತೆಯ ಒಣನಗುವಿನೊಳಗೆ
ಕಣ್ಣೀರು ಅಳುತಿತ್ತು
ನನ್ನ ಬಂಢ ಬೆವರಿನ ಮುಂದೆ
ಆಗ ನಾನು
ಬೋಕಿಯಾಗಿ
ಸುಣ್ಣವಾದೆ ಅಷ್ಟೆ..

 

 

 

 

 

 

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

2 thoughts on “ಒಂದು ರಾತ್ರಿಯ ದೀಪ – ನಾಗರಾಜ ಕೋರಿ

  • October 9, 2018 at 10:14 am
    Permalink

    ತುಂಬಾ ಚೆಂದದ ಬರಹಗಳು
    ಕವಿತೆಯ ಭಾವಾಭಿವ್ಯಕ್ತಿ ಸೊಗಸಾಗಿದೆ.

    Reply

Leave a Reply

Your email address will not be published. Required fields are marked *