ಅವಳ ಹೆಜ್ಜೆ- ಕನ್ನಡತಿ ಉತ್ಸವ

ಕನ್ನಡತಿ ಉತ್ಸವ -2018 ಪ್ರಯುಕ್ತ ಕಿರುಚಿತ್ರ ನಿರ್ಮಿಸಬಯಸುವ ಮಹಿಳೆಯರಿಂದ ಅವಳ ಹೆಜ್ಜೆ ಸಂಸ್ಥೆ ಅರ್ಜಿ ಆಹ್ವಾನಿಸಿದೆ.

ಪ್ರತಿ ವರ್ಷ ರಾಜ್ಯೋತ್ಸವದ ಸಂದರ್ಭದಲ್ಲಿ, ಕನ್ನಡತಿಯರ ಪಾತ್ರವನ್ನು ಸ್ಮರಿಸಲು ಪ್ರಾರಂಭಿಸಿದ ವಾರ್ಷಿಕ ಹಬ್ಬದ ಅಂಗವಾಗಿ ಈ ಸ್ಪರ್ಧೆ ಏರ್ಪಡಿಸಲಾಗಿದೆ.

ಈ ಆಹ್ವಾನ ಇನ್ನೂ ಚಿತ್ರಕಥೆಯ ಹಂತದಲ್ಲಿದ್ದು, ಚಿತ್ರೀಕರಣ ಇನ್ನೂ ಶುರುವಾಗಿಲ್ಲದ ಕಿರುಚಿತ್ರಗಳಿಗೆ ಸೂಕ್ತ. ಆಯ್ದ ತಂಡಗಳಿಗೆ ಅನುಭವಿ ಚಿತ್ರನಿರ್ಮಾಪಕರ ಮಾರ್ಗದರ್ಶನದ ವ್ಯವಸ್ಥೆಯಿದೆ.
ಆಯ್ದ ಕಿರುಚಿತ್ರಗಳನ್ನು “ನನ್ನದೊಂದು ಕಥೆ” ಎಂಬ ಶೀರ್ಷಿಕೆಯಡಿಯಲ್ಲಿ ನವಂಬರ್ ತಿಂಗಳಿನಲ್ಲಿ ನಡೆಸಲಿರುವ “ಕನ್ನಡತಿ ಉತ್ಸವ-2018” ದಲ್ಲಿ ಪ್ರದರ್ಶಿಸಲಾಗುವುದು.

ಆಸಕ್ತರು ’31 ಆಗಸ್ಟ್ 2018’ ರೊಳಗೆ ತಮ್ಮ ಕಥೆಯ ಸಂಕ್ಷಿಪ್ತ ವಿವರದೊಂದಿಗೆ ಅವಳ ಹೆಜ್ಜೆ ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.

https://avalahejje.in/kn/kannadati-utsava-kn.html

ಸಂಪರ್ಕಿಸಿ: 82172 97238/ contact@avalahejje.com

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *